ಇಸ್ಲಮಾಬಾದ್: ಕೊರೋನಾ ವಿರುದ್ಧ ಹೋರಾಡಲು ವಿಶ್ವದಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳು ಭಾರತದ ಸಹಾಯ ಕೇಳಿದೆ. ಇದೀಗ ಪರೋಕ್ಷವಾಗಿ ಪಾಕಿಸ್ತಾನವೂ ಭಾರತದ ಎದುರು ಕೈಚಾಚಿದೆ.
ಕೊರೋನಾ ಸೋಂಕಿನಿಂದಿರುವ ಪಾಕಿಸ್ತಾನಕ್ಕೆ ವೆಂಟಿಲೇಟರ್ ಗಳ ಅವಶ್ಯಕತೆ ಇರುವುದರಿಂದ ಪಾಕಿಸ್ತಾನ ಭಾರತಕ್ಕೆ ಮೊರೆ ಇಟ್ಟಿದೆ. ಭಾರತ ಪಾಕಿಸ್ತಾನಕ್ಕೆ 10 ಸಾವಿರ ವೆಂಟಿಲೇಟರ್ ನೀಡಬೇಕಾಗಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೇಳಿಕೊಂಡಿದ್ದಾರೆ.
ಈ ಸಹಾಯವನ್ನು ಪಾಕಿಸ್ತಾನ ಎಂದಿಗೂ ಮರೆಯುವುದಿಲ್ಲ. ಇದರಿಂದ ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ಬಲವಾಗಲಿದೆ. ನಮಗೆ ಕ್ರಿಕೆಟ್ ಸರಣಿ ಆಯೋಜಿಸಲಷ್ಟೇ ಹೇಳಲು ಸಾಧ್ಯ, ಮುಂದಿನ ತೀರ್ಮಾನಗಳನ್ನು ಅಧಿಕಾರಿಗಳೇ ತಿಳಿಸಬೇಕು ಎಂದು ಅಖ್ತರ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ನಡೆದು ಸುಮಾರು ವರ್ಷಗಳೇ ಕಳೆದಿದೆ. ನಮ್ಮ ಪಂದ್ಯಗಳು ಕೇವಲ ಮಾಧ್ಯಮಗಳಲ್ಲಿ ಪ್ರಸಾರವಾಗುವುದಕ್ಕೆ ಮೀಸಲಾಗಿದೆ. ನಿಧಿ ಸಂಗ್ರಹಣೆ ಮಾಡುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಏಕದಿನ ಸರಣಿ ಆಯೋಜನೆ ಮಾಡುವಂತೆ ಶೋಯೆಬ್ ಅಖ್ತರ್ ಮಾತನಾಡಿದ್ದಾರೆ.
ಎರಡೂ ರಾಷ್ಟ್ರಗಳು ಕೊರೋನಾ ಮಹಾಮಾರಿಯಿಂದ ಬಳಲುತ್ತಿರುವ ಕಾರಣ ಭಾರತ ಮತ್ತು ಪಾಕಿಸ್ತಾನದ ನಡುವೆ ಸರಣಿ ಪಂದ್ಯ ಯೋಜಿಸಿದರೆ, ರಾಷ್ಟ್ರಗಳಿಗೆ ಆರ್ಥಿಕವಾಗಿ ಸಹಾಯವಾಗಲಿದೆ ಎಂದು ತಿಳಿಸಿದರು.