ದಿನಭವಿಷ್ಯ | ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಂಭವ, ಅವಕಾಶ ಕೈಬಿಡಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ವೃತ್ತಿಗೆ ಸಂಬಂಧಿಸಿ ಉತ್ತಮವಾದ ಬೆಳವಣಿಗೆ. ನೀವು ಬಯಸಿದ ಏಳಿಗೆಯನ್ನು ಕಾಣುತ್ತೀರಿ. ಆಪ್ತರ ಸಂಗದಲ್ಲಿ ಸಂಜೆಯನ್ನು ಕಳೆಯುವಿರಿ.

ವೃಷಭ

ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸೂಕ್ತ ದಿನ. ನಿಮ್ಮ ಪ್ರಸ್ತಾಪಕ್ಕೆ ಬೆಂಬಲ ದೊರಕುವುದು. ಮನಸ್ಸಿನ ಒತ್ತಡ  ನಿವಾರಣೆ.

ಮಿಥುನ
ವ್ಯಕ್ತಿಯೊಬ್ಬರು ನಿಮ್ಮ ಅಸಮಾಧಾನಕ್ಕೆ ಕಾರಣರಾಗುತ್ತಾರೆ. ಅವರ ಜತೆ ಜಾಗ್ರತೆಯಿಂದ ವ್ಯವಹರಿಸಿ. ಇಲ್ಲದಿದ್ದರೆ ಇಕ್ಕಟ್ಟಿಗೆ ಸಿಲುಕುವಿರಿ.

ಕಟಕ
ನಿಮ್ಮ ಕೆಲಸಕ್ಕೆ ಪ್ರಭಾವಿ ವ್ಯಕ್ತಿಗಳ ನೆರವು ಪಡೆ ಯಬೇಕಾಗಬಹುದು. ಮನೆಯಲ್ಲಿನ ಪರಿಸ್ಥಿತಿ ಮನಸ್ಸಿನ ಶಾಂತಿ ಕದಡುತ್ತದೆ. ಸಣ್ಣಪುಟ್ಟ ಆರೋಗ್ಯ ಬಾಧೆ.

ಸಿಂಹ
ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಂಭವ. ಅವಕಾಶ ಕೈಬಿಡಬೇಡಿ. ಸಾಂಸಾರಿಕ ಸಮಸ್ಯೆಗಳು ಪರಿಹಾರ ಕಾಣುತ್ತವೆ. ಕೌಟುಂಬಿಕ ಸಂತೋಷ.

ಕನ್ಯಾ
ಇತರರ ಪುಕ್ಕಟೆ ಸಲಹೆ ಗಳನ್ನು ಕಣ್ಣು ಮುಚ್ಚಿ ಅನುಸರಿಸಬೇಡಿ. ಅದರಿಂದ ತೊಂದರೆಗೆ ಸಿಲುಕುವಿರಿ. ಉದ್ಯೋಗದಲ್ಲಿ ಹೊಸ ಅವಕಾಶ ಲಭ್ಯ.

ತುಲಾ
ನೀವಿಂದು ವಿವಿಧ ಹೊಣೆಗಾರಿಕೆ ನಿರ್ವಹಿಸಬೇಕಾಗು ವುದು. ಮನೆಯಲ್ಲಿ ಮತ್ತು ಕಚೇರಿಯಲ್ಲಿ ನಿಮ್ಮನ್ನೆ ಎಲ್ಲರೂ ಅವಲಂಬಿಸುತ್ತಾರೆ.

ವೃಶ್ಚಿಕ
ಮೆಚ್ಚಿದವರೊಂದಿಗೆ ಕಾಲ ಕಳೆಯುವ ಅವಕಾಶ ದೊರಕಲಿದೆ. ಮನಸ್ಸಿನ ಭಾವನೆ ವ್ಯಕ್ತ ಪಡಿಸಲು ಸಕಾಲ. ಉದ್ಯೋಗಿಗಳಿಗೆ ಸಂತೋಷದ ಸುದ್ದಿ.

ಧನು
ಖಾಸಗಿ ಅಥವಾ ವೃತ್ತಿ ಬದುಕಿನಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳ ಬೇಕಾಗುತ್ತದೆ. ಅದ ರಿಂದ ನಿಮಗೆ ಒಳಿತೇ ಆಗಲಿದೆ. ಆರೋಗ್ಯ ಸಮಸ್ಯೆ ಪರಿಹಾರ.

ಮಕರ
ಕೆಲವು ಅಚ್ಚರಿಗಳು ಕಾದಿವೆ. ಚಿಂತೆಬೇಡ, ಎಲ್ಲವೂ ಕುಶಿ ತರುವಂತಹವೆ. ನಿಷ್ಪಲ ವೆಂದು ಭಾವಿಸಿದ ಕಾರ್ಯವು ಉತ್ತಮ ಫಲಿತಾಂಶ ತರಲಿದೆ.

ಕುಂಭ
ಮನೆ ಮತ್ತು ಕೆಲಸದ ಸ್ಥಳ ಎರಡರಲ್ಲೂ ಹೆಚ್ಚು ಕೆಲಸ. ಹೆಚ್ಚು ಹೊಣೆಗಾರಿಕೆ. ದೈಹಿಕ ಶ್ರಮಕ್ಕಿಂತಲೂ ಮಾನಸಿಕವಾಗಿ ಹೆಚ್ಚು ಬಳಲುತ್ತೀರಿ.

ಮೀನ
ಆರ್ಥಿಕ ಸಂಕಷ್ಟ. ಇತರರ ಮುಂದೆ ಮುಜುಗರಕ್ಕೆ ಈಡಾಗುವ ಪ್ರಸಂಗ . ಕೌಟುಂಬಿಕ ಸಹಕಾರ  ದಿಂದ ಪ್ರಮುಖ ಗುರಿ ಸಾಧಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!