ಹೊಸದಿಗಂತ ಆನ್ ಲೈನ್ ಡೆಸ್ಕ್:
ಲಸಿಕೆ ನೀಡಿಕೆ ಆರಂಭವಾದ ಒಂದೇ ವಾರದಲ್ಲಿ ಬರೋಬ್ಬರಿ 10.43 ಲಕ್ಷ ಕೊರೋನಾ ವಾರಿಯಸ್೯ಗೆ ಲಸಿಕೆ ನೀಡುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ.
ಅಮೆರಿಕ, ಇಸ್ರೇಲ್ 10 ಲಕ್ಷ ಜನರಿಗೆ ತುರ್ತು ಲಸಿಕೆ ನೀಡಲು 10 ದಿನ ಸಮಯ ತೆಗೆದುಕೊಂಡಿತ್ತು, ಆದರೆ ಭಾರತ 7 ದಿನದಲ್ಲಿ
10.43 ಲಕ್ಷ ಜನರಿಗೆ ಲಸಿಕೆ ನೀಡುವ ಮೂಲಕ ದಾಖಲೆ ಮಾಡಿದೆ. ಜ.16ರಂದು ಕೊರೋನಾ ಲಸಿಕೆಯ ಮೊದಲ ಹಂತದಲ್ಲಿ 3ಲಕ್ಷ ಮಂದಿಗೆ ಲಸಿಕೆ ನೀಡಲಾಗಿತ್ತು. ಬಳಿಕ ಪ್ರತಿದಿನ 1 ಲಕ್ಷದಂತೆ ಒಂದು ವಾರದಲ್ಲಿ 10,43,534 ಜನರಿಗೆ ಕೊರೋನಾ ಲಸಿಕೆ ನೀಡಲಾಗಿದೆ.
ಎರಡನೇ ಹಂತದಲ್ಲಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಕೊರೋನಾ ಲಸಿಕೆ ಪಡೆಯಲಿದ್ದಾರೆ.