SHOCKING | ಶಾಲಾ ವಿದ್ಯಾರ್ಥಿಗಳ ಬೋಟ್ ಮುಳುಗಿ 10 ಮಕ್ಕಳು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದಲ್ಲಿ ವಿದ್ಯಾರ್ಥಿಗಳು ಕುಳಿತಿದ್ದ ದೋಣಿ ಮುಳುಗಿದ್ದು, 10 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಸರೋವರದ ದಡದ ಬಳಿ ಮಕ್ಕಳ ಕೂಗು ಕೇಳಿ ತಕ್ಷಣ ಜನರು ಬಂದಿದ್ದಾರೆ. ನೀರಿನಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ತುರ್ತು ಸೇವೆಗಳು ಸ್ಥಳಕ್ಕೆ ದಾವಿಸಿದೆ.

50ವಿದ್ಯಾರ್ಥಿಗಳು ತಾಂಡಾ ಸರೋವರದ ಬಳಿ ಪಿಕ್‌ನಿಕ್‌ಗಾಗಿ ಬಂದಿದ್ದರು. 25 ಜನರು ನೀರಿನಲ್ಲಿ ಮುಳುಗಿದ್ದು, ಅವರನ್ನು ರಕ್ಷಿಸಲಾಗಿದೆ. 7-12 ವರ್ಷದೊಳಗಿನ ಮಕ್ಕಳಿದ್ದ ಬೋಟ್ ಏಕಾಏಕಿ ಮುಳುಗಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಎಂಟು ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!