Monday, August 8, 2022

Latest Posts

ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ನಡೆಯಲಿರುವ 10 ದಿನಗಳ ಕ್ರಾಫ್ಟ್ ಬಜಾರ್ ಮೇಳಕ್ಕೆ ಸಿಕ್ಕಿತು ಚಾಲನೆ

ಹೊಸ ದಿಗಂತ ವರದಿ, ಮೈಸೂರು:

ಜವಳಿ ಮಂತ್ರಾಲಯ ಭಾರತ ಸರ್ಕಾರದ ಸಹಯೋಗದೊಂದಿಗೆ ಮೈಸೂರಿನ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಫೆ.26ರಿಂದ
10 ದಿನಗಳ ಕಾಲ ‘ಕ್ರಾಫ್ಟ್ ಬಜಾರ್’ ರಾಷ್ಟಿಯ ಮತ್ತು ರಾಜ್ಯ ಪ್ರಶಸ್ತಿ ಪಡೆದ ಕುಶಲ ಕರ್ಮಿಗಳಿಂದ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದ್ದು, ಶುಕ್ರವಾರ ಮೇಳಕ್ಕೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಚಾಲನೆ ನೀಡಿದರು.
ಈ ವಸ್ತುಪ್ರದರ್ಶನವು ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನ 120ನೇ ಮೇಳವಾಗಿದೆ. ರಾಷ್ಟಿಯ ಮತ್ತು ರಾಜ್ಯ ಪ್ರಶಸ್ತಿ ಪಡೆದಿರುವ ದೇಶದ ನಾನಾ ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚಿನ ಕುಶಲಕರ್ಮಿಗಳು ತಮ್ಮ ರಾಜ್ಯಗಳ ವಿಭಿನ್ನ ಸಾಂಸ್ಕತಿಕ ಗರಿಮೆಯ ಕರಕುಶಲ ವಸ್ತುಗಳನ್ನು ನಿತ್ಯ ಬೆ.10.ರಿಂದ ರಾತ್ರಿ 9.ರವರಿಗೆ ಪ್ರದರ್ಶಿಸಿ ಮಾರಾಟ ಮಾಡಲಾಗುವುದು,
ಮಹಾರಾಷ್ಟç ರಾಜ್ಯದ ಟಸ್ಸರ್ ರೇಷ್ಮೆ ಸೀರೆ, ಕೊಲ್ಲಾಪುರ್ ಚಪ್ಪಲಿ, ಹೊಸದಿಲ್ಲಿ ರಾಜ್ಯದ ಮಣ್ಣಿನಿಂದ ತಯಾರಿಸಿರುವ ಗೃಹಲಾಂಕಾರಿಕ ಹೂಜಿಗಳು, ಪೀಠೋಪಕರಣಗಳು, ಡ್ರೆಸ್‌ಗಳು ಗುಜರಾತ್ ರಾಜ್ಯ ಬಣ್ಣದ ಹೂಕುಂದಗಳು, ಕುಚ್‌ವೂಲ್ಲನ್ ಶಾಲು ಮತ್ತು ಪ್ಯಾಚ್‌ವರ್ಕ್ ಪಶ್ಚಿಮ ಬಂಗಾಳದ ಸೆಣಬಿನ ವಸ್ತು, ಬಾಟಿಕ್ ಸೀರೆ, ಜದೋಷಿ ಸೀರೆ, ಕಾಂತ ಎಂಬ್ರಾಯಿಡರಿ ಸೀರೆ, ಟೆರಕೋಟಾ ಈಶಾನ್ಯ ರಾಜ್ಯ ಬಿದಿರಿನ ಗೃಹಪಯೋಗಿ ವಸ್ತು ಮತ್ತು ಕೃತಕ ಹೂವು, ಅರಗಿನ ಬಳೆ, ವರ್ಣಚಿತ್ರ, ಎಂಬ್ರಾಯಿಡರಿ, ಸಾಂಪ್ರದಾಯಿಕ ಗೊಂಬೆ ಮತ್ತು ಕೊಟಾ ಸೀರೆ ಆಂದ್ರ ಪ್ರದೇಶದ ಲೇಸ್, ಹೈದರಾಬಾದಿನ ಮುತ್ತಿನ ಆಭರಣ, ವೆಜಿಟೆಬಲ್ ಪ್ರಿಂಟ್ ಡ್ರೆಸ್ ಮೆಟೀರಿಯಲ್ ತಮಿಳುನಾಡಿನ ಮರದ ಕೆತ್ತನೆ, ಕೋರಾಗ್ರಾಸ್, ಕೈಮಗ್ಗ ವಸ್ತç, ಮಧ್ಯಪ್ರದೇಶದ ಚಂದೇರಿ ರೇಷ್ಮೆ ಸೀರೆ ಹಾಗೂ ಚರ್ಮದಿಂದ ತಯಾರಿಸಿರುವ ವಿವಿಧ ವಿನ್ಯಾಸದ ಪ್ರಾಣಿ, ಬಾಟಿಕ್ ಉಡುಗೆ ತೊಡುಗೆ ಮತ್ತು ಕಂಚಿನ ವಿಗ್ರಹ, ನೆಲಹಾಸು, ಫುಟ್ ಮ್ಯಾಟ್ ಮತ್ತು ಚಿಕನ್ ಎಂಬ್ರಾಯಿಡರಿ ಜವಳಿ ವಸ್ತç ಮತ್ತು ಬೆಡ್ ಶೀಟ್, ಕರ್ನಾಟಕದ ಕುಂದಣಕಲೆ, ರೇಶ್ ಸೀರೆ, ಚನ್ನಪಟ್ಟಣದ ಗೊಂಬೆ, ಮಣ್ಣಿನಿಂದ ತಯಾರಿಸಿದ ಹೂಜಿ, ಹೂ-ಕುಂದ, ವಸ್ತುಗಳು ಪ್ರದರ್ಶನದಲ್ಲಿ ಮಾರಾಟಕಿಡಲಾಗಿದೆ.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬೆಠಸೂರು ಮಠ್, ನಿರ್ದೇಶಕ ಮೊರಬದ ಮಲ್ಲಿಕಾರ್ಜುನ್, ಜಂಟಿ ನಿರ್ದೇಶಕ ಡಾ.ಹೆಚ್.ಆರ್.ಮಹದೇವಸ್ವಾಮಿ, ಕಾವೇರಿ ಹ್ಯಾಂಡ್ ಲೂಮ್ಸ್ ವ್ಯವಸ್ಥಾಪಕ ನಿರ್ದೇಶಕ ಮುದ್ದಯ್ಯ, ರಾಕೇಶ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss