ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀಜಿಂಗ್‌ನಲ್ಲಿ ಬೆಳ್ಳಂಬೆಳಗ್ಗೆ ವರ್ಕೌಟ್ ಮಾಡಲು ಬಂದವರ ಮೇಲೆ ಛಾವಣಿ ಕುಸಿದಿದ್ದು, 10 ಮಂದಿ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ 5:30ಕ್ಕೆ ಎಂದಿನಂತೆ ವಕೌಟ್ ಮಾಡಲು ಜನರು ಜಿಮ್‌ಗೆ ಬಂದಿದ್ದಾರೆ. ಏಕಾಏಕಿ ಜಿಮ್‌ನ ಛಾವಣಿ ಕುಸಿದುಬಿದ್ದಿದ್ದು, 14 ಮಂದಿ ಅಡಿಯಲ್ಲಿ ಸಿಲುಕಿದ್ದಾರೆ. ಇದರಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸುಮಾರು 160 ಕ್ಕೂ ಹೆಚ್ಚು ಅಗ್ನಿಶಾಮಕ ಟ್ರಕ್‌ಗಳು ಸ್ಥಳದಲ್ಲಿವೆ. ಕಳಪೆ ಕಾಮಗಾರಿ ಹಿನ್ನೆಲೆ ಛಾವಣಿ ಕುಸಿದಿದ್ದು, ಕಟ್ಟಡ ನಿರ್ಮಾಣ ಉಸ್ತುವಾರಿಗಳನ್ನು ಬಂಧಿಸಲಾಗಿದೆ.