VIRAL VIDEO | ಅಜ್ಜಿ ಸರ ಕೀಳಲು ಬಂದಿದ್ದ ಖದೀಮನಿಗೆ ಬ್ಯಾಗ್‌ನಿಂದ ಹಿಗ್ಗಾಮುಗ್ಗ ಥಳಿಸಿ ಓಡಿಸಿದ 10ರ ಮೊಮ್ಮಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ಅಜ್ಜಿಯ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಲು ಬಂದಿದ್ದ ಖದೀಮನಿಗೆ 10 ವರ್ಷದ ಬಾಲಕಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.

ಮಹಾರಾಷ್ಟ್ರದ ಪುಣೆಯ ಮಾಡೆಲ್ ಕಾಲೋನಿಯಲ್ಲಿ 60 ವರ್ಷದ ಲತಾ ಘಾಗ್, ಮೊಮ್ಮಗಳಾದ ರುತ್ವಿ ಘಾಗ್ ಮನೆಗೆ ತೆರಳುತ್ತಿದ್ದರು. ಈ ವೇಳೆ ಅಜ್ಜಿಯ ಸರಕ್ಕೆ ಕಣ್ಣಿಟ್ಟ ವ್ಯಕ್ತಿಯೊಬ್ಬ ಸ್ಕೂಟಿಯಲ್ಲಿ ಬಂದಿದ್ದಾನೆ.

ದಾರಿ ಕೇಳುವ ನೆಪದಲ್ಲಿ ಗಾಡಿ ನಿಲ್ಲಿಸಿ ಅಜ್ಜಿ ಕತ್ತಿಗೆ ಕೈ ಹಾಕಿದ್ದಾನೆ. ಇದನ್ನು ನೋಡಿದ ಮೊಮ್ಮಗಳು ಕೈಲಿದ್ದ ಬ್ಯಾಗ್‌ನ್ನು ಬಳಸಿ ಆತನಿಗೆ ಹೊಡೆದು ಕೂಗಿದ್ದಾಳೆ. ಇದರಿಂದ ಗಾಬರಿಯಾದ ಕಳ್ಳ ಓಡಿಹೋಗಿದ್ದಾನೆ.

ಈ ಘಟನೆ ಫೆ.25ರಂದು ನಡೆದಿದ್ದು, ಸಿಸಿಟಿವಿ ಫೂಟೇಜ್ ವೈರಲ್ ಆಗುತ್ತಿದ್ದಂತೆಯೇ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಅಜ್ಜಿ ಮೊಮ್ಮಗಳನ್ನು ಕರೆಸಿ ಮಾತನಾಡಿದ್ದು, ದೂರು ದಾಖಲಿಸಿಕೊಂಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!