ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………
ಹೊಸ ದಿಗಂತ ವರದಿ, ತುಮಕೂರು:
ತುಮಕೂರು ಸರ್ಕಾರಿ ನಿಲ್ದಾಣ ವಿರುವ ಬಸವೇಶ್ವರ ರಸ್ತೆಯ ರೇಣುಕಾ ವಿದ್ಯಾಪೀಠದಲ್ಲಿ 100ಹಾಸಿಗೆ ಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳಾದ ವೈ.ಎಸ್. ಪಾಟೀಲ್. ಸಿ.ಇ.ಓ.ವಿದ್ಯಾಕುಮಾರಿ.ಡಿ.ಹೆಚ್.ಓ.ಡಾ.ನಾಗೇಂದ್ರಪ್ಪ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ಅವರ ಜೊತೆಯಲ್ಲಿ ಸ್ಥಳ ಪರಿಶೀಲನೆ ನಂತರ ಈ ವಿಷಯ ತಿಳಿಸಿದರು.
ಮಂಚ ಮತ್ತು ಹಾಸಿಗೆ ವ್ಯವಸ್ಥೆ ಯನ್ನು ರೇಣುಕಾ ವಿದ್ಯಾಪೀಠದಿಂದ ಮಾಡಲಾಗುತ್ತದೆ. ಔಷಧ. ವೈದ್ಯರು ಮತ್ತು ನರ್ಸ್ ಗಳನ್ನು ಜಿಲ್ಲಾಡಳಿತವನ್ನು ಒದಗಿಸುತ್ತಿದೆ ಎಂದು ಅವರು ತಿಳಿಸಿದರು. ಮೊದಲ ಸುತ್ತಿನ ಕೊವಿಡ್ ಸಂದರ್ಭದಲ್ಲಿ ನಗರ ವೀರಶೈವ ಸಮಾಜದಿಂದ 25 ಸಾವಿರಕ್ಕೂ ಹೆಚ್ಚಿನ ಜನರಿಗೆ ಆಹಾರದ ವ್ಯವಸ್ಥೆಯನ್ನು ಸಮಾಜ ಮಾಡಿತ್ತು. ಈಗ ಕೊವಿಡ್ ಕೇರ್ ಸೆಂಟರ್ ಮಾಡಲಾಗುತ್ತಿದೆ ಎಂದ ಅವರು ಇದಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಪ್ರೇರಕ ಶಕ್ತಿ ಎಂದರು.ರಮೇಶ್ ಬಾಬು.ವಿಘ್ನೇಶ್ವರ ಚಂದ್ರ ಮೌಳಿ. ಶಿವಕುಮಾರ್. ಪ್ರಸನ್ನ ಇತರರು ಇದ್ದರು.