Wednesday, August 10, 2022

Latest Posts

100 ಕೋಟಿ ಕೋವಿಡ್​ ವ್ಯಾಕ್ಸಿನೇಷನ್​: ಭಾರತದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಮೆರಿಕ- ಇಸ್ರೇಲ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದು, ಕಳೆದ 9 ತಿಂಗಳಲ್ಲಿ ಬರೋಬ್ಬರಿ 100 ಕೋಟಿ ಕೋವಿಡ್​ ವ್ಯಾಕ್ಸಿನೇಷನ್​ ಡೋಸ್​​ ನೀಡುವ ಮೂಲಕಐತಿಹಾಸಿಕ ಸಾಧನೆ ​ ಮಾಡಿದೆ.
ಭಾರತ ಸರ್ಕಾರದ ಈ ಐತಿಹಾಸಿಕ ಸಾಧನೆಗೆ ಇದೀಗ ಯುಎಸ್​​ ರಾಯಭಾರಿ ಹಾಗು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಅಮೆರಿಕ​​ ರಾಯಭಾರಿ 1 ಬಿಲಿಯನ್​ ಕೋವಿಡ್​ ವ್ಯಾಕ್ಸಿನೇಷನ್​ ಪೂರೈಕೆ ಮಾಡಿದಕ್ಕಾಗಿ ಅಭಿನಂದನೆಗಳು. ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಹೊಸದೊಂದು ಮೈಲಿಗಲ್ಲು ನಿರ್ಮಾಣ ಮಾಡಿದೆ ಎಂದಿದೆ.

ಪ್ರಧಾನಿ ಮೋದಿಗೆ ಅಭಿನಂದನೆ ತಿಳಿಸಿದ ಇಸ್ರೇಲ್
ಭಾರತದ ಕೋವಿಡ್ 19 ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿದ ಪ್ರಧಾನಿ ಮೋದಿಗೆ ಅಭಿನಂದನೆಗಳು. ಭಾರತೀಯ ಜನರಿಗೆ 1 ಬಿಲಿಯನ್‌ಗಿಂತಲೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ. ಈ ಜೀವರಕ್ಷಕ ಲಸಿಕೆಗಳು ಜಾಗತಿಕ ಸಾಂಕ್ರಾಮಿಕ ರೋಗವನ್ನು ಸೋಲಿಸಲು ನಮ್ಮೆಲ್ಲರಿಗೂ ಸಹಾಯ ಮಾಡುತ್ತಿದೆ ಎಂದು ಇಸ್ರೇಲ್ ನ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿದ್ದಾರೆ.

ಭಾರತದಲ್ಲಿ 100 ಕೋಟಿ ಕೊರೋನಾ ಲಸಿಕೆ ಡೋಸ್ ಪೂರ್ಣಗೊಳ್ಳುತ್ತಿದ್ದಂತೆ ಎಲ್ಲ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ವಿಮಾನಗಳು, ಬಸ್ ನಿಲ್ದಾಣ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಇದರ ಬಗ್ಗೆ ಘೋಷಣೆ ಮಾಡಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss