Thursday, August 11, 2022

Latest Posts

100 ಕೋಟಿ ಕೋವಿಡ್ ಲಸಿಕೆ ದಾಖಲೆ: ಬಿಜೆಪಿ ಜಿಲ್ಲಾಧ್ಯಕ್ಷರ ಶ್ಲಾಘನೆ

ಹೊಸ ದಿಗಂತ ವರದಿ, ಮಂಡ್ಯ :

ವಿಶ್ವದಾದ್ಯಂತ ಜೀವಭಯ ಸೃಷ್ಠಿಸಿದ್ದ ಕೋವಿಡ್‌ನಂತಹ ಮಹಾಮಾರಿಗೆ ನಿಗದಿತ ಕಾಲಮಿತಿಯಲ್ಲೇ ಲಸಿಕೆಯನ್ನು ಸಂಶೋಧಿಸಿ ದೇಶದ 100 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ಹಾಕುವುದರ ಮೂಲಕ ದಾಖಲೆ ಸೃಷ್ಠಿಸಿದ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಕುಮಾರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ಕಾಣಿಸಿಕೊಂಡಿದ್ದ ಹಲವಾರು ಜೀವಹಾನಿ ಕಾಯಿಲೆಗಳಿಗೆ ಇಂದಿಗೂ ಲಸಿಕೆಯನ್ನೇ ಕಂಡುಹಿಡಿಯಲಾಗದ ಸ್ಥಿತಿಯಲ್ಲಿರುವಾಗ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಸರ್ಕಾರ ಕೋವಿಡ್‌ನಂತಹ ಭೀಕರ ಕಾಯಿಲೆಗೆ ತೀವ್ರಗತಿಯಲ್ಲಿ ಸಂಶೋಧನೆ ನಡೆಸಿ ಲಸಿಕೆ ಪತ್ತೆಕಂಡುಹಿಡಿಯುವಲ್ಲಿ ಯಶಸ್ವಿಯಾಗಿರುವುದು ಮತ್ತೊಂದು ಮೈಲಿಗಲ್ಲಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಕೋವಿಡ್ ಲಸಿಕೆ ನೀಡಿಕೆಯಲ್ಲಿ ಕರ್ನಾಟಕ 8ನೇ ಸ್ಥಾನಕ್ಕೆರಿದ್ದುಘಿ,ಕೇಂದ್ರ ಸರ್ಕಾರಕ್ಕೆ ಉತ್ತಮ ಸಹಕಾರ ನೀಡಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಲಸಿಕೆ ನೀಡಿಕೆಯಲ್ಲಿ ತೋರಿದ ಆಸಕ್ತಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಲಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ದಿಟ್ಟ ಕ್ರಮಗಳಿಂದಾಗಿ ಮತ್ತಷ್ಟು ಹೆಚ್ಚಿನ ಸಾಧನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಂಡ್ಯದಲ್ಲಿ 17.96 ಲಕ್ಷ ಲಸಿಕೆ

ಮಂಡ್ಯ ಜಿಲ್ಲೆಯಲ್ಲಿ 17,96,722 ಮಂದಿಗೆ ಲಸಿಕೆ ನೀಡಲಾಗಿದ್ದುಘಿ, ರಾಜ್ಯದಲ್ಲೇ ಮಂಡ್ಯ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿದೆ. ಇಂತಹ ಸಾಧನೆಗೆ ಆರೋಗ್ಯ, ಕಂದಾಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾಮಾಜಿಕ ಸಂಘಟನೆಗಳು, ಕೊರೋನಾ ವಾರಿಯರ್ಸ್‌ಗಳು ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ 11,81,371 ಮೊದಲ ಲಸಿಕೆ ನೀಡಲಾಗಿದ್ದುಘಿ, 6,15,350 ಮಂದಿಗೆ 2ನೇ ಡೋಸ್ ಲಸಿಕೆ ನೀಡುವ ಮೂಲಕ ಸಾಧನೆ ಮಾಡಲಾಗಿದೆ. ಇದರಲ್ಲಿ 9,70,628 ಮಂದಿ ಮಹಿಳೆಯರು, 8,25,784 ಮಂದಿ ಪುರುಷಕರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 16,43,834 ಕೋವಿಶೀಲ್ಡ್ ಲಸಿಕೆ ನೀಡಿದ್ದರೆ, 1,52,888 ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ರಾಷ್ಟ್ರ ಶತಕೋಟಿ ದಾಖಲೆ ಲಸಿಕೆ ಸಾಧನೆ ಮಾಡಿರುವ ಇಂದು ಜಿಲ್ಲಾದ್ಯಂತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. 40 ಸಾವಿರಕ್ಕೂ ಹೆಚ್ಚು ಲಸಿಕೆ ನೀಡುವ ಗುರಿ ಹೊಂದಲಾಗಿದ್ದುಘಿ, ಆರೋಗ್ಯ ಕಾರ‌್ಯಕರ್ತರು ಉತ್ತಮ ಕಾರ‌್ಯಯೋಜನೆ ಹಮ್ಮಿಕೊಂಡು ಯಶಸ್ವಿಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪಕ್ಷದ ವತಿಯಿಂದಲೂ ಲಸಿಕಾ ಅಭಿಯಾನ ಹಮ್ಮಿಕೊಂಡು ಜಾಗೃತಿ ಮೂಡಿಸುವ ಕೆಲಸವನ್ನು ನಮ್ಮೆಲ್ಲಾ ಕಾರ‌್ಯಕರ್ತರೂ ಮುಂದುವರಿಸಿದ್ದಾರೆ. ಕೊರೋನಾ ಮುಕ್ತ ಬೂತ್ ಮಾಡುವ ಉದ್ದೇಶದಿಂದ ಶ್ರಮವಹಿಸಿ ಬೂತ್, ಶಕ್ತಿಘಿಕೇಂದ್ರ, ಮಹಾಶಕ್ತಿ ಕೇಂದ್ರ ಹಾಗೂ ಮಂಡಲ ಸೇರಿದಂತೆ ತಳ ಮಟ್ಟದಿಂದಲೂ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ ಅಂಗನವಾಡಿ-ಆಶಾ ಕಾರ‌್ಯಕರ್ತರು, ಕೊರೋನಾ ವಾರಿಯರ್ಸ್‌ಘಿ, ವೈದ್ಯರು, ದಾದಿಯರು ಸೇರಿದಂತೆ ಇತರೆ ಇಲಾಖೆಗಳ ಸಿಬ್ಬಂದಿಗಳನ್ನೂ ಗೌರವಿಸುವುದರ ಮೂಲಕ ಲಿಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲಾಗಿದೆ ಎಂದು ವಿಜಯಕುಮಾರ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss