Wednesday, August 10, 2022

Latest Posts

ನೂರನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ಪ್ರಮುಖ ಹೆದ್ದಾರಿ ತಡೆಗೆ ಕರೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆ 100 ನೇ ದಿನಕ್ಕೆ ಕಾಲಿಟ್ಟಿದೆ.
100 ನೇ ದಿನದ ಅಂಗವಾಗಿ ನಾಳೆ ನವದೆಹಲಿಯ ಹೊರವಲಯದಲ್ಲಿ ಪ್ರಮುಖ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಮೂರು ತಿಂಗಳಿನಿಂದಲೂ ರೈತರು ಕೃಷಿ ಕಾಯ್ದೆ ಹಿಂಪಡೆಯುವಂತೆ ಪ್ರತಿಭಟಿಸುತ್ತಿದ್ದು, ರೈತರು ಸಿಂಘು ಗಡಿಯಲ್ಲೇ ಟಿಕಾಣಿ ಹೂಡಿದ್ದಾರೆ.
ಈ 100 ದಿನಗಳ ಪ್ರತಿಭಟನೆಯ ನಂತರ ಸರ್ಕಾರದ ಮೇಲೆ ನೈತಿಕ ಒತ್ತಡ ಬೀರಲಿದೆ ಎಂದು ನಾವು ನಂಬುತ್ತೇವೆ. ಯಾಕೆಂದರೆ ಹವಾಮಾನವೂ ಹದೆಗೆಡುತ್ತಿದೆ. ಇದು ಸರ್ಕಾರವನ್ನು ದುರ್ಬಲಗೊಳಿಸಲಿದ್ದು, ನಮ್ಮೊಂದಿಗೆ ಮಾತುಕತೆಗಾಗಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ವಕ್ತಾರ ದರ್ಶನ್ ಪಾಲ್ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss