ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಭಾರತದ ಇಬ್ಬರಿಗೆ ಸ್ಥಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಪ್ರತಿಷ್ಠಿತ ಟೈಮ್ ಮ್ಯಾಗಜೀನ್ 2023ರ ಸಾಲಿನ ಪ್ರಭಾವಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಇಬ್ಬರು ಸ್ಥಾನ ಪಡೆದಿದ್ದಾರೆ. ಹೌದು, ಭಾರತದ ಹೆಮ್ಮೆಯ ನಟ ಶಾರುಖ್ ಖಾನ್ ಹಾಗೂ ದೇಶದ ಹೆಮ್ಮೆಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ರಾಜಮೌಳಿ ಹಾಗೂ ಶಾರುಖ್ ಖಾನ್‌ಗೆ ಈ ವರ್ಷ ಅತ್ಯುತ್ತಮವಾಗಿದೆ, ಇಬ್ಬರೂ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಆರ್‌ಆರ್‌ಆರ್ ಮೂಲಕ ಇಡೀ ಜಗತ್ತೇ ಭಾರತೀಯ ಸಿನಿಮಾದತ್ತ ತಿರುಗಿ ನೋಡುವಂತೆ ರಾಜಮೌಳಿ ಮಾಡಿದ್ದಾರೆ.

SRK responds to criticism: 'When will you play a dad? Pathaan 2nd half was  bad' | Bollywood - Hindustan Timesಇನ್ನು ಸತತ ಫ್ಲಾಪ್‌ನಿಂದ ಬೇಸತ್ತು ನಾಲ್ಕು ವರ್ಷದ ನಂತರ ಕಂ ಬ್ಯಾಕ್ ಮಾಡಿದ ಶಾರುಖ್ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಬಾಲಿವುಡ್‌ನ ಸಾಕಷ್ಟು ಸಿನಿಮಾಗಳು ಸಾವಿರ ಕೋಟಿ ಗಡಿ ದಾಟಿರಲಿಲ್ಲ, ಆದರೆ ಬಾಲಿವುಡ್‌ಗೆ ಹೊಸ ಹುಮ್ಮಸ್ಸು ನೀಡಿದ್ದು, ಪಠಾಣ್.

S.S. Rajamouli Is on the 2023 TIME 100 List | TIMEಕಳೆದ ವರ್ಷ ರಿಲೀಸ್ ಆದ ಆರ್‌ಆರ್‌ಆರ್ ಎಲ್ಲೆಡೆ ಗೆಲುವು ಸಾಧಿಸಿದೆ, ಆಸ್ಕರ್ ಪಡೆದು ಬೀಗುತ್ತಿದೆ. ರಾಜಮೌಳಿ ಖ್ಯಾತಿ ಆಸ್ಕರ್‌ನಿಂದ ಇನ್ನಷ್ಟು ಹೆಚ್ಚಿದೆ. ಶಾರುಖ್‌ರ ಪಠಾಣ್ ಕೂಡ ವಿದೇಶದಲ್ಲಿಯೂ ಸದ್ದು ಮಾಡಿದ್ದು, ಶಾರುಖ್ ಖ್ಯಾತಿ ಏಕಾಏಕಿ ಹೆಚ್ಚಿತ್ತು.

ಟೈಮ್ಸ್ ಮ್ಯಾಗಜೀನ್‌ನಲ್ಲಿ ರಾಜಮೌಳಿ ಬಗ್ಗೆ ನಟಿ ಆಲಿಯಾ ಭಟ್ ನಾಲ್ಕು ಮಾತುಗಳನ್ನು ಬರೆದಿದ್ದಾರೆ ಇನ್ನು ಶಾರುಖ್ ಖಾನ್ ಬಗ್ಗೆ ನಟಿ ದೀಪಿಕಾ ಪಡುಕೋಣ್ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!