ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನತೆ ಕಾಂಗ್ರೆಸ್ ಗೆಲ್ಲಿಸಿದ್ದು, ಕಾಂಗ್ರೆಸ್ ಘೋಷಿಸಿದ್ದ ಗ್ಯಾರೆಂಟಿಗಳಿಗಾಗಿ ಕಾದು ಕುಳಿತಿದ್ದಾರೆ. ಇತ್ತ ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮಹತ್ವದ ಘೋಷಣೆ ಮಾಡಿದ್ದು, ಜೂನ್ 1 ರಿಂದ ಜಾರಿಗೆ ಬರುವಂತೆ ಪ್ರತಿ ಮನೆಗೂ 100 ಯುನಿಟ್ ವಿದ್ಯುತ್ ಉಚಿತವಾಗಿ ಪೂರೈಕೆ ಮಾಡಲಾಗುತ್ತದೆ ಎಂದಿದ್ದಾರೆ.
100 ಯುನಿಟ್ ವಿದ್ಯುತ್ ಮಾತ್ರ ಬಳಕೆ ಮಾಡುವವರಿಗೆ ಶೂನ್ಯ ಬಿಲ್ ಬರಲಿದೆ, ಇನ್ನು100 ಯುನಿಟ್‌ಗಿಂತ ಹೆಚ್ಚು ಬಳಸುವವರಿಗೆ 100 ಯುನಿಟ್ ಕಡಿತವಾದ ಬಿಲ್ ಬರಲಿದೆ. 100 ಯುನಿಟ್ ಫ್ರೀ ವಿದ್ಯುತ್ ಉಡುಗೊರೆಯಿಂದ ಸಾಕಷ್ಟು ಮಂದಿಗೆ ಸಹಾಯವಾಗಲಿದೆ.
200 ಯುನಿಟ್ ಬಳಕೆ ಮಾಡುವವರಿಗೂ ಹೆಚ್ಚಿನ ರಿಯಾಯಿತಿ ಸಿಕ್ಕಿದ್ದು, ಮೊದಲ 100 ಯುನಿಟ್ ಫ್ರೀ, ಇನ್ನುಳಿದ 100 ಯುನಿಟ್ ಬಳಕೆಯ ಮೇಲೆ ಸ್ಥಿರ ಶುಲ್ಕಗಳು, ಇಂಧನ ಹೆಚ್ಚುವರಿ ಶುಲ್ಕ ಇನ್ನಿತರ ಶುಲ್ಕಗಳು ಇರುವುದಿಲ್ಲ.