ಮಹಾರಾಷ್ಟ್ರದ ಥಾಣೆ ಪ್ರದೇಶದಲ್ಲಿ 1,000 ಜಿಲೆಟಿನ್ ಕಡ್ಡಿ ಸೀಜ್: ಮೂವರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಥಾಣೆ ಪ್ರದೇಶದಲ್ಲಿ ಪೊಲೀಸರು ಭರ್ಜರಿ ಶೋಧಕಾರ್ಯ ನಡೆಸಿದ್ದು, 1,000 ಜಿಲೆಟಿನ್ ಕಡ್ಡಿಗಳು, 1,000 ಡೆಟೋನೇಟರ್‌ಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು, ಮೂವರನ್ನು ಬಂಧಿಸಿದ್ದಾರೆ.

ಭಿವಂಡಿಯ ನಿಜಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಡಿ ನಾಕಾ ಪ್ರದೇಶದಲ್ಲಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಇಕೋ ಕಾರ್ ಅಡ್ಡಗಟ್ಟಲಾಗಿದ್ದು, ಕಾರ್‌ನಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.

ಅಲ್ಪೇಶ್ ಪಾಟೀಲ್, ಪಂಕಜ್ ಚವ್ಹಾಣ್ ಹಾಗೂ ಸಮೀರ್ ವೇದ್ಗಾ ಎಂಬ ಮೂವರನ್ನು ಪೊಲೀಸರು ಬಂಧಿಸಿ, ಜಿಲೆಟಿನ್ ಹಾಗೂ ಡೆಟೋನೇಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರೆಲ್ಲರೂ ಪಾಲ್ಘಡದ ವಿಕ್ರಮಗಢದವರಾಗಿದ್ದಾರೆ. ಸ್ಫೋಟಕಳನ್ನು ಕಳವು ಮಾಡಿ, ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದರು ಎಂದು ಪ್ರಥಮ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!