Wednesday, August 17, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 105 ಮಂದಿಗೆ ಗುಣಮುಖ: 84 ಜನರಿಗೆ ಕೋವಿಡ್ ಸೋಂಕು

ಹೊಸದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಶನಿವಾರ 84 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 76 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 105 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 2035 ಜನರಿಗೆ ಕೋವಿಡ್ ವೈರಸ್ ದೃಢಗೊಂಡಿದೆ. ಇದರಲ್ಲಿ 1807 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 3256 ಜನರು ಗುಣಮುಖರಾದರು.
ಕಲ್ಲಿಕೋಟೆ ಜಿಲ್ಲೆಯಲ್ಲಿ 255, ಎರ್ನಾಕುಳಂ 232, ಕೊಲ್ಲಂ 224, ಕಣ್ಣೂರು 205, ಮಲಪ್ಪುರಂ 173, ಕೋಟ್ಟಾಯಂ 168, ತಿರುವನಂತಪುರ 162, ತೃಶೂರು 153, ಆಲಪ್ಪುಳ 133, ಕಾಸರಗೋಡು 84, ಪಾಲಕ್ಕಾಡು 80, ಪತ್ತನಂತ್ತಿಟ್ಟ 70, ವಯನಾಡು 53, ಇಡುಕ್ಕಿ ಜಿಲ್ಲೆಯಲ್ಲಿ 43 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮಧ್ಯೆ ಕೋವಿಡ್ ವೈರಸ್ ಬಾಧಿಸಿ ಕೇರಳದಲ್ಲಿ ಶನಿವಾರ 12 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!