ರಾಜ್ಯದಲ್ಲಿ ಮತ್ತೆ ಸೇವೆಗೆ 108 ಆಂಬುಲೆನ್ಸ್: ಸಮಸ್ಯೆ ಪರಿಹಾರ, ಸಹಾಯವಾಣಿ ಸಂಖ್ಯೆ ಪುನರಾರಂಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ 108 ಆಂಬುಲೆನ್ಸ್ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದೆ. ಸಹಾಯವಾಣಿ ಸಂಖ್ಯೆ ಆರಂಭಗೊಂಡಿದ್ದು, ಸಮಸ್ಯೆ ನಿವಾರಿಸಲಾಗಿದೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 108 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿ ಎಂಬುದಾಗಿ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತಂತೆ ಟ್ಟಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ 108 ಆಂಬುಲೆನ್ಸ ಕರೆ ಸ್ವೀಕಾರ ವ್ಯವಸ್ಥೆಯಲ್ಲಿ, ತಾಂತ್ರಿಕ ತೊಂದರೆಯಿಂದಾಗಿ, ವ್ಯತ್ಯಯ ಉಂಟಾಗಿತ್ತು. ಈಗ ಅದನ್ನು ಸರಿ ಪಡಿಸಲಾಗಿದ್ದು ಕರೆ ಸ್ವೀಕಾರ ಸೇವೆ‌ ಪುನರಾರಂಭ ಗೊಂಡಿದೆ. ಆದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಸಂಪರ್ಕಿಸಿ ಎಂದಿದೆ.

ಇನ್ನೂ 108 ತುರ್ತು ಆಂಬುಲೆನ್ಸ್ ಸಹಾಯವಾಣಿ ಸಂಖ್ಯೆಯಲ್ಲದೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲಾ ಜಿಲ್ಲೆಯ DHO ಗಳು ಹೆಚ್ಚುವರಿ ದೂರವಾಣಿ ಸಂಖ್ಯೆಗಳನ್ನು ಅಯಾ ಜಿಲ್ಲೆಯ ಜನರಿಗೆ ಒದಗಿಸುತ್ತಿದ್ದಾರೆ ಎಂಬುದಾಗಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!