Tuesday, August 16, 2022

Latest Posts

ಕಟ್ಟಡ ನಿರ್ಮಾಣ ಪ್ರದೇಶದಲ್ಲಿ 11 ಅಡಿಯ ಮೊಸಳೆ ಪತ್ತೆ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಗುಜರಾತ್ ನ ವಡೋದರಾದಲ್ಲಿ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ 11 ಅಡಿಯ ಬೃಹದಾಕಾರದ ಮೊಸಳೆ ಪತ್ತೆಯಾಗಿದ್ದು, ಈ ಕುರಿತು ವಿಡಿಯೋ ವೈರಲ್ ಆಗತೊಡಗಿದೆ.
ವನ್ಯಜೀವಿ ರಕ್ಷಣಾ ಟ್ರಸ್ಟ್ ನ ಅಧ್ಯಕ್ಷ ಅರವಿಂದ್ ಪವಾರ್ ನೀಡಿರುವ ಮಾಹಿತಿಯ ಪ್ರಕಾರ , ಮೊಸಳೆ 10-11 ಅಡಿಯಷ್ಟು ಉದ್ದವಿದ್ದು, ಕೇಲನ್ ಪುರ್ ಪ್ರದೇಶದ ಚರಂಡಿಯಲ್ಲಿ ಕಾಣಿಸಿಕೊಂಡಿದೆ.
ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಬಿಲ್ಡರ್ ನಮಗೆ ಕರೆ ಮಾಡಿ ಮೊಸಳೆ ಪತ್ತೆಯಾಗಿರುವುದರ ಬಗ್ಗೆ ಮಾಹಿತಿ ನೀಡಿದರು. ಮೊಸಳೆಯನ್ನು ರಕ್ಷಣೆ ಮಾಡಲಾಗಿದ್ದು, ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದೇವೆ ಎಂದು ಪವಾರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss