ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ್ ಅಂಧೇರಿ ವೆಸ್ಟ್ನಲ್ಲಿ ಪಟಾಕಿ ಸಿಡಿದು ಬಾಲಕನೊಬ್ಬ ಕಣ್ಣು ಕಳೆದುಕೊಂಡಿದ್ದಾನೆ.
ಸಾಯಿ ಅನಿಲ್ ಭರಂಕರ್ ಸ್ನೇಹಿತರ ಜೊತೆ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಮೂಗಿಗೂ ಗಾಯಗಳಾಗಿವೆ. ಶೀಘ್ರವೇ ಆಸ್ಪತ್ರೆಗೆ ತೆರೆಳಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಈ ಬಗ್ಗೆ ಸಾಯಿ ಅನಿಲ್ ತಾಯಿ ಮಾಹಿತಿ ನೀಡಿದ್ದು, ರಸ್ತೆಯ ಬದಿಯಲ್ಲಿ ಮಗ ನಿಂತಿದ್ದ. ಸ್ನೇಹಿತರ ಪಟಾಕಿ ಹೊಡೆಯುತ್ತಿದ್ದರು.ಈ ಸಮಯ ಪಟಾಕಿಯೊಂದು ಕಣ್ಣಿನ ಬಳಿ ಬಂದು ಸಿಡಿಯಿತು ಎಂದಿದ್ದಾರೆ