Monday, August 8, 2022

Latest Posts

111 ಈ ರೀತಿ ಸಂಖ್ಯೆಗಳು ಪದೇ ಪದೆ ನಿಮ್ಮ ಕಣ್ಣಿಗೆ ಬೀಳುತ್ತಿದೆಯಾ? ಏಂಜಲ್ ನಂಬರ್ ಮೂಲಕ ಯೂನಿವರ‍್ಸ್ ನಮಗೇನು ಹೇಳಲು ಪ್ರಯತ್ನಿಸುತ್ತಿದೆ?

ಕೆಲವೊಮ್ಮೆ ನೀವು ಟ್ರಾಫಿಕ್‌ನಲ್ಲಿ ನಿಂತಾಗ ಯಾವುದೋ ಸಂಖ್ಯೆ ನೋಡುತ್ತೀರಿ. ಉದಾಹರಣೆಗೆ 1111 ಎಂದುಕೊಳ್ಳಿ. ನಂತರ ನಿಮಗೆ ಯಾವುದೋ ಸಂಖ್ಯೆಯಿಂದ ಕಾಲ್ ಬರುತ್ತದೆ. ಅದರಲ್ಲೂ ಇದೆ ನಂಬರ್. ಇನ್ನು ಸಮಯ ನೋಡಿದಾಗ 11:11ಆಗಿರುತ್ತದೆ. ಈ ರೀತಿ ಒಂದೇ ಅಂಕಿಗಳನ್ನು ನಾವು ಪದೇ ಪದೆ ನೋಡುತ್ತಿದ್ದರೆ ಇದಕ್ಕೆ ಅರ್ಥವಿದೆ. ಇಡೀ ವಿಶ್ವವೇ ನಮಗೇನೋ ಸಂದೇಶ ಕೊಡಲು ಕಾಯುತ್ತಿದೆ ಎನ್ನುತ್ತಾರೆ. ಏನರ್ಥ ನೋಡೋಣ ಬನ್ನಿ..

  • ಒಂದು: 11,111,1111 ಈ ಅಂಕಿಗಳು ಪದೇ ಪದೆ ನಿಮಗೆ ಕಾಣಿಸಿಕೊಳ್ಳುತ್ತಿದ್ದರೆ ನಿಮ್ಮನ್ನು ನೀವು ನಂಬಬೇಕು ಎಂದರ್ಥ. ನಿಮ್ಮಲ್ಲಿ ನಿಮಗೆ ನಂಬಿಕೆ ಹೆಚ್ಚಿದರೆ ನಿಮ್ಮ ಸಾಧನೆ ಹತ್ತಿರವಾಗುತ್ತದೆ. ಈ ಸಂಖ್ಯೆ ಹೆಚ್ಚು ನೋಡಿದಾಗ ನೀವು ಜೀವನದಲ್ಲಿ ಮುಂದಿನ ಹೆಜ್ಜೆ ಇಡಬಹುದು.
  • ಎರಡು: 22,222,2222 ಈ ಸಂಖ್ಯೆ ನಿಮಗೆ ಕಾಣಿಸಿಕೊಂಡರೆ ನೀವು ಎಚ್ಚರಿಕೆಯ ಹೆಜ್ಜೆ ಇಡುವ ಅವಶ್ಯ ಇದೆ ಎಂದು ಅರ್ಥ. ನಿಮ್ಮ ಗೋಲ್ ಸೆಟ್ ಮಾಡುತ್ತಿದ್ದರೆ ಇನ್ನೊಮ್ಮೆ ಯೋಚಿಸಿ.
  • ಮೂರು: 33,333,3333 ಈ ಸಂಖ್ಯೆ ಕಾಣಿಸಿಕೊಂಡರೆ ನೀವು ನಿಮ್ಮ ಪಾಸ್ಟ್‌ಒಂದು ವಿಷಯಕ್ಕೆ ಒದ್ದಾಡುತ್ತಿದ್ದೀರಿ. ಅದನ್ನು ಬಿಟ್ಟು ಬರಲು ಆಗುತ್ತಿಲ್ಲ. ಆದರೆ ಅದನ್ನು ಬಿಡದಿದ್ದರೆ ನೀವು ಮುಂದೆ ಹೋಗಲು ಆಗುವುದಿಲ್ಲ ಎಂದರ್ಥ. ನಿಮ್ಮ ಪ್ರೀತಿ ಪಾತ್ರರ ಬಳಿ ಮುಚ್ಚಿಟ್ಟ ವಿಷಯ ಹೇಳಿಬಿಡಿ.
  • ನಾಲ್ಕು:44,444,4444 ಈ ಸಂಖ್ಯೆ ಅರ್ಥ ನೀವು ನಿಮ್ಮ ಸಂಬಂಧಗಳ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ನಿಮ್ಮ ದೇಹದ ಬಗ್ಗೆ ಕಾಳಜಿ ಅಗತ್ಯ.
  • ಐದು: 55,555,5555 ಈ ಸಂಖ್ಯೆ ನೋಡಿದರೆ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ಅರ್ಥ. ಹೊಸತನ್ನು ಟ್ರೈ ಮಾಡಿ ಎಂದು ಯೂನಿವರ‍್ಸ್ ನಿಮಗೆ ಸಂದೇಶ ನೀಡುತ್ತಿದೆ. ಹಾಗೇ ಪಾಸಿಟಿವ್ ವ್ಯಕ್ತಿತ್ವ ನಿಮ್ಮದಾಗಿರಲಿ ಎಂದು ಹೇಳುತ್ತಿದೆ.
  • ಆರು:66,666,6666 ಈ ಸಂಖ್ಯೆ ನೋಡಿದರೆ ನೀವು ಮನೆ ಹಾಗೂ ಕೆಲಸ ಎರಡರ ಮಧ್ಯೆ ಬ್ಯಾಲೆನ್ಸ್ ಇಡುತ್ತಿಲ್ಲ. ಕೆಲಸ ಮಾಡುವಾಗ ಮನೆ ಮರೆತಿದ್ದೀರಿ ಎಂದರ್ಥ. ನೀವು ಹೇಗೆ ಸಮಯ ಕಳೆಯುತ್ತಿದ್ದೀರಿ ಎನ್ನುವ ಬಗ್ಗೆ ಗಮನ ಹರಿಸಿ. ಜೀವನದಲ್ಲಿ ಉತ್ಸಾಹ ಮರಳಿ ತನ್ನಿ.
  • ಏಳು: 77,777,7777 ಈ ಸಂಖ್ಯೆ ಕಾಣಿಸಿದರೆ ನಿಮಗೆ ಸ್ವಲ್ಪ ಸಮಯ ಬ್ರೇಕ್ ಬೇಕಿದೆ ಎಂದರ್ಥ. ಟ್ರಿಪ್ ಮಾಡುವ ಪ್ಲಾನ್ ಇದ್ದರೆ ಇದೇ ಸಮಯ. ಮನೆಯವರ ಜೊತೆ ಅಥವಾ ಸ್ನೇಹಿತರ ಜೊತೆ ಹೊರಗೆ ಹೋಗಿ ಸ್ವಲ್ಪ ಸಮಯ ಆರಾಮಾಗಿರಿ.
  • ಎಂಟು: 88,888,8888 ಇದರರ್ಥ ನಿಮಗೆ ಕಷ್ಟ ಬರುತ್ತದೆ. ಆದರೆ ಕುಗ್ಗಬೇಡಿ. ಈ ಸಂಖ್ಯೆ ಹೆಚ್ಚು ಕಾಣಿಸಿದರೆ ಇದು ನಿಮ್ಮ ಕಷ್ಟದ ದಿನಗಳು. ಇದಕ್ಕೆ ನೀವು ಕುಗ್ಗದೇ ಕೆಲಸ ಮಾಡಿ. ಎಲ್ಲವೂ ಸರಿಯಾಗುತ್ತದೆ.
  • ಒಂಬತ್ತು: 99,999,9999 ಈ ಸಂಖ್ಯೆ ನೋಡಿದಾಗ ನಿಮಗೆ ಕರುಣೆ ಅಗತ್ಯ ಇದೆ ಎಂದರ್ಥ. ನೀವು ಸ್ವಲ್ಪ ಹಾರ್ಷ್ ಆಗಿದ್ದೀರಿ ಎಂದರ್ಥ. ಸ್ವಲ್ಪ ಕರುಣೆ ಪ್ರೀತಿ ಅವಶ್ಯ ಇದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss