spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜುಲೈನಲ್ಲಿ 1,16,393 ಕೋಟಿ ರೂ. ಜಿಎಸ್‌ಟಿ ಸಂಗ್ರಹ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೋವಿಡ್ ದ್ವಿತೀಯ ಅಲೆಯು ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ನೀಡಿರುವ ಹೊರತಾಗಿಯೂ, ಜುಲೈನಲ್ಲಿ ಜಿಎಸ್‌ಟಿ ಸಂಗ್ರಹವು 1.16 ಲ.ಕೋ.ರೂ.ಗಳನ್ನು ದಾಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಷ್ಟೊಂದು ಅತ್ಯಕ ಜಿಎಸ್‌ಟಿ ಸಂಗ್ರಹ ಇದು ದ್ವಿತೀಯ ಬಾರಿ. ಈ ಮುನ್ನ ಏಪ್ರಿಲ್‌ನಲ್ಲಿ ದಾಖಲೆಯ ಅಂದರೆ, 1.41 ಲ.ಕೋ.ರೂ.ಜಿಎಸ್‌ಟಿ ಸಂಗ್ರಹವಾಗಿತ್ತು.
ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಆದಾಯದಲ್ಲಿ ಶೇ.33 ಏರಿಕೆಯಾಗುತ್ತಲೇ ಇದೆ. ಜುಲೈನಲ್ಲಿನ ಜಿಎಸ್‌ಟಿ ಸಂಗ್ರಹ ಪ್ರಮಾಣ (1.16 ಲಕ್ಷ ಕೋಟಿ)ವು ಆರ್ಥಿಕತೆಯ ತ್ವರಿತ ಚೇತರಿಕೆಯನ್ನು ಪ್ರತಿಬಿಂಬಿಸಿದೆ. ಮುಂಬರುವ ತಿಂಗಳಲ್ಲೂ ಇದು ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಹಣಕಾಸು ಖಾತೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. 2020ರ ಜುಲೈನಲ್ಲಿ ಜಿಎಸ್‌ಟಿ ಸಂಗ್ರಹ 87,422ಕೋ.ರೂ.ಗಳಷ್ಟಿತ್ತು.
2021 ರ ಜುಲೈನಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯ 1,16,393ಕೋ. ರೂ.ಗಳು. ಈ ಪೈಕಿ ಕೇಂದ್ರ ಜಿಎಸ್‌ಟಿ 22,197 ಕೋಟಿ, ರಾಜ್ಯ ಜಿಎಸ್‌ಟಿ 25,541ಕೋಟಿ ಸಮಗ್ರ ಜಿಎಸ್‌ಟಿ 57,864 ಕೋಟಿ (ವಸ್ತುಗಳ ಆಮದು ಮೇಲೆ ಸಂಗ್ರಹಿತ 27,900 ಕೋಟಿ ಸಹಿತ), ತೆರಿಗೆ 7,790ಕೋ.( ವಸ್ತುಗಳ ಆಮದು ಮೇಲೆ ಸಂಗ್ರಹಿತ 815 ಕೋಟಿ ತೆರಿಗೆ ಸಹಿತ)ರೂ. 2021 ರ ಜುಲೈನಲ್ಲಿ ಸಂಗ್ರಹವಾದ ಆದಾಯವು ಕಳೆದ ವರ್ಷ ಇದೇ ತಿಂಗಳಲ್ಲಿ ಸಂಗ್ರಹಿತ ಜಿಎಸ್‌ಟಿ ಆದಾಯಕ್ಕಿಂತ 33 ಶೇ.ಅತ್ಯಕವಾಗಿದೆ. ಇದು ಜುಲೈ 1-31ರ ಮಧ್ಯೆ ಸಲ್ಲಿಕೆಯಾದ ಜಿಎಸ್‌ಟಿ ರಿಟರ್ನ್ಸ್, ವಸ್ತುಗಳ ಆಮದು ಮೇಲೆ ಸಂಗ್ರಹಿತ ತೆರಿಗೆ ಇತ್ಯಾದಿ ಒಳಗೊಂಡಿದೆ.
ಕೋವಿಡ್ ದ್ವಿತೀಯ ಅಲೆಗೆ ಮುನ್ನ ಕಳೆದ ಎಂಟು ತಿಂಗಳಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹವು 1 ಲ. ಕೋ. ರೂ.ಗಳಿಗೆ ತಲುಪಿತ್ತು. ಆದರೆ ದ್ವಿತೀಯ ಕೋವಿಡ್ ಅಲೆಯಿಂದಾಗಿ ವಿವಿಧ ರಾಜ್ಯಗಳಲ್ಲಿ ಮತ್ತೆ ಲಾಕ್‌ಡೌನ್‌ಜಾರಿಯಾಯಿತು, ಆರ್ಥಿಕ ಚಟುವಟಿಕೆಗಳ ವೇಗಕ್ಕೆ ಮತ್ತೆ ಹೊಡೆತ ಬೀಳುವಂತಾಗಿತ್ತು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss