ಬೆಂಗಳೂರು: ನಗರದಲ್ಲಿ ಕೊರೋನಾ ಭೀತಿಗೆ ಜನರು ಮಾಸ್ಕ್ ಖರೀದಿ ಮಾಡುವುದು ಹೆಚ್ಚಾಗಿದ್ದು, ಅದನ್ನೇ ದುರುಪಯೋಗ ಪಡಸಿಕೊಂಡ ದುಶ್ಕರ್ಮಿಗಳು ಎನ್ 95 ನಕಲಿ ಮಾಸ್ಕ್ ಗಳನ್ನು ತಯಾರಿಸಿದ್ದಾರೆ.
ಈ ಸ್ಥಳಕ್ಕೆ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು(ಸಿಸಿಬಿ) ದಾಳಿ ನಡೆಸಿದ್ದು, 12,000 ನಕಲಿ ಮಾಸ್ಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಸೋಮವಾರ ರಾತ್ರಿ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು 12 ಸಾವಿರ ನಕಲಿ ಎನ್ 95 ಮಾಸ್ಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮಾಸ್ಕ್ ಗಳು ಸಾಧಾರಣ ಬಟ್ಟೆಯಿಂದ ಮಾಡಿ, ಅದರ ಮೇಲೆ ಎನ್ 95 ನಕಲಿ ಸೀಲನ್ನು ಹಾಕಿ, ಜನರಿಗೆ ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ವರದಿ ತಿಳಿಸಿದೆ
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಿನಿಖೆ ಆರಂಭಿಸಿದ್ದಾರೆ.