Wednesday, August 10, 2022

Latest Posts

ನೇಪಾಳ- ಭೂತಾನ್ ಗಡಿಗೆ 12 ಹೊಸ ಬೆಟಾಲಿಯನ್‌ ಬಲ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ನೇಪಾಳ ಹಾಗೂ ಭೂತಾನ್ ಗಡಿಯನ್ನು ಬಲಪಡಿಸಲು 13 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನೊಳಗೊಂಡ 12 ಸಶಸ್ತ್ರ ಸೀಮಾ ಬಲದ ಬೆಟಾಲಿಯನ್ ನಿಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಭೂತಾನ್ ಹಾಗೂ ಟಿಬೆಟ್‌ಗೆ ಹೊಂದಿಕೊಂಡಿರುವ ಸಿಕ್ಕಿಂನ ತ್ರಿ-ಜಂಕ್ಷನ್ ಪ್ರದೇಶ ಸೇರಿದಂತೆ ನೇಪಾಳ, ಭೂತಾನ್ ಗಡಿ ಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಬಲಪಡಿಸಲು ಬೆಟಾಲಿಯನ್‌ಗಳು ನೆರವಾಗಲಿವೆ.
ಸರ್ಕಾರ ಬೆಟಾಲಿಯನ್‌ಗಳ ನಿಯೋಜನೆಗೆ ಅನುಮತಿ ನೀಡಿದೆ. ಇದರಿಂದ ಗಡಿ ಭದ್ರತೆಯನ್ನು ಇನ್ನಷ್ಟು ಬಲಗೊಳಿಸಲಾಗುವುದು. ಮುಂದಿನ ನಾಲ್ಕು ವರ್ಷಗಳಲ್ಲಿ 12 ಹೊಸ ಬೆಟಾಲಿಯನ್ ಗಳನ್ನು ಹಂತ ಹಂತವಾಗಿ ಮೂರು ಘಟಕಗಳನ್ನಾಗಿ ಹೆಚ್ಚಿಸಲಾಗುವುದು ಎಂದು ಎಸ್‌ಎಸ್‌ಬಿ ಮಹಾನಿರ್ದೇಶಕ ಡಿಜಿ ಕುಮಾರ್ ರಾಜೇಂದ್ರ ಚಂದ್ರ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss