ಚಾರ್ಮಾಡಿ ಘಾಟಿಯಲ್ಲಿ ಸಿಕ್ಕಿ ಹಾಕಿಕೊಂಡು 12 ಚಕ್ರದ ಲಾರಿ: ವಾಹನ ಸವಾರರ ಪರದಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಾರ್ಮಾಡಿ ಘಾಟಿಯಲ್ಲಿ12 ಚಕ್ರದ ಲಾರಿಯೊಂದು 7ನೇ ತಿರುವಿನಲ್ಲಿ ಸಿಕ್ಕಿ ಹಾಕಿ ಕೊಂಡು ಸುಮಾರು ಒಂದು ತಾಸು ಇತರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿ ಟ್ರಾಫಿಕ್ ಜಾಮ್ ಆದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕೊಟ್ಟಿಗೆಹಾರ ಚೆಕ್ ಪೋಸ್ಟ್ ಮೂಲಕ ಸಂಚರಿಸಿದ ಲಾರಿ 7ನೇ ತಿರುವಿನಲ್ಲಿ ಸಿಲುಕಿ ಕೊಂಡಿತು.ಸ್ಥಳೀಯರ ಹಾಗೂ ಇತರ ವಾಹನಗಳ ಚಾಲಕರ ಸಹಕಾರದಿಂದ ಲಾರಿಯನ್ನು ತೆರವು ಗೊಳಿಸಿದ ಬಳಿಕ ಇತರ ವಾಹನಗಳು ಸಂಚರಿಸಿದವು.
ಸದ್ಯ ಇಲ್ಲಿ ಘನ ವಾಹನಗಳಿಗೆ ಪ್ರವೇಶ ನಿಷೇಧ ಇದ್ದರು ಈ ಲಾರಿ ಕೊಟ್ಟಿಗೆ ಹಾರ ಚೆಕ್ ಪೋಸ್ಟ್ ಮೂಲಕ ಸಂಚರಿಸಿದೆ.ಶನಿವಾರವಾದ ಕಾರಣ ಘಾಟಿಯಲ್ಲಿ ಹೆಚ್ಚಿನ ವಾಹನದಟ್ಟಣೆಯು ಇತ್ತು.

ಆದೇಶ ಗೊಂದಲ
ಚಾರ್ಮಾಡಿ ಘಾಟಿಯಲ್ಲಿ ನಿಗದಿ ಪಡಿಸಿದ ವಾಹನಗಳ ಹೊರತು ಇತರ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ.ಆದರೂ ಇಲ್ಲಿ ಘನ ವಾಹನಗಳು ಸಂಚರಿಸಿ ಸಂಚಾರ ವ್ಯತ್ಯಯ ಉಂಟಾಗುತ್ತದೆ.ಆದೇಶ ಬದಲಾವಣೆ ಕುರಿತು ಇದುವರೆಗೆ ಯಾವುದೇ ಇಲಾಖೆಯಿಂದ ಆದೇಶ ಹೊರ ಬಿದ್ದಿಲ್ಲ.

ಪ್ರವಾಸಿಗರ ಪುಂಡಾಟ
ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವ ಐಷಾರಾಮಿ ಕಾರುಗಳ ಸನ್ ರೂಫ್ ತೆರೆದು ಪ್ರವಾಸಿಗರು ತಲೆ ಹೊರಗೆ ಹಾಕಿ ಸಾಕಷ್ಟು ಪುಂಡಾಟ ನಡೆಸುವ ಬಗ್ಗೆ ಇತರ ವಾಹನ ಸವಾರರು ದೂರುತ್ತಿದ್ದಾರೆ.ಇಲ್ಲಿ ಮರಗಳ ರೆಂಬೆ,ಕಲ್ಲುಗಳು ರಸ್ತೆಗೆ ಸಮೀಪವಿದ್ದಕ ಅಪಾಯ ಎದುರಾಗುವ ಸಾಧ್ಯತೆಯೂ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!