ಮಕ್ಕಳ ಕೈಗೆ ಮೊಬೈಲ್ ಕೊಡ್ತೀರಾ? ಪೋಷಕರೇ ಈ ಸುದ್ದಿ ಓದಿಯಾದ್ರೂ ಎಚ್ಚೆತ್ತುಕೊಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊಬೈಲ್ ಫೋನ್ ಚಾರ್ಜ್ ಮಾಡುವಾಗ ವಿದ್ಯುತ್‌ ಸ್ಪರ್ಶಿಸಿ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೃತಳನ್ನು ಬಲ್ಲಿಯಾದಲ್ಲಿರುವ ಸೈದ್‌ಪುರ್ ಗ್ರಾಮದ ನಿವಾಸಿ 12 ವರ್ಷದ ಬಾಲಕಿ ಮಾನಸಿ ಎಂದು ಗುರುತಿಸಲಾಗಿದೆ.

ಮೊಬೈಲ್‌ ಫೋನ್‌ ಚಾರ್ಜ್‌ ಹಾಕಿರುವ ವೇಳೆ ವಿದ್ಯುತ್ ಆಘಾತದಿಂದ ಮಾನಸಿ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!