Wednesday, August 10, 2022

Latest Posts

ಮತ್ತೆ ರಾಜ್ಯಕ್ಕೆ ಬಂದಿಳಿಯಿತು 120 ಟನ್ ಆಕ್ಸಿಜನ್: ಈವರೆಗೂ 480 ಟನ್ ಆಕ್ಸಿಜನ್ ಪೂರೈಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಕೊರೋನಾ ಸೋಂಕಿನ ನಡುವೆ ಆಕ್ಸಿಜನ್ ಕೊರತೆ ಎದುರಾಗಿದ್ದು, ಇಂದು ಮತ್ತೆ 120 ಟನ್ ಗಳ ಲಿಕ್ಷಿಡ್ ಆಕ್ಸಿಜನ್ ಬಂದು ತಲುಪಿದೆ.
ಇಂದು ನಾಲ್ಕನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಟಾಟಾನಗರದಿಂದ ಬೆಂಗಳೂರಿನ ವೈಟ್ ಫೀಲ್ಡ್ ಗೆ ಮೂಲಕ ಆಕ್ಸಿಜನ್ ಪೂರೈಕೆಯಾಗಿದ್ದು, ಈವರೆಗೂ 480 ಟನ್ ಗಳ ಆಕ್ಸಿಜನ್ ರೈಲಿನಲ್ಲಿ ಬಂದಿಳಿದಿದೆ.
ಇದಕ್ಕೂ ಮುನ್ನ ಮೂರು ಬಾರಿ ಜಾರ್ಖಂಡ್ ಹಾಗೂ ಒಡಿಶಾದಿಂದ 360 ಟನ್ ಗಳ ಆಕ್ಸಿಜನ್ ರವಾನೆ ಮಾಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss