ಬೆಂಗಳೂರು : ಆಸ್ತಿಯ ಆಸೆಗಾಗಿ 13 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಕಾಮುಕನನ್ನು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ರೇಪ್ ದೂರು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಿಂತಾಮಣಿ ಮೂಲದ ವೆಂಕಟೇಶ್ ಎಂಬಾತ 13 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ ಪರಾರಿಯಾಗಿದ್ದನು. ಅತ್ಯಾಚಾರಕ್ಕೊಳಗಾದ ಬಾಲಕಿ ತಂದೆ ದೂರು ನೀಡಿದ್ದರಿಂದ ಆರೋಪಿ ವೆಂಕಟೇಶ್, ಇದಕ್ಕೆ ಸಹಕರಿಸಿದ ಮುನಿಕೃಷ್ಣ, ವೆಂಕಟೇಶಪ್ಪನನ್ನು ಪೊಲೀಸರು ಬಂಧಿಸಿದ್ದರು.
ಇದೀಗ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ವೆಂಕಟೇಶನಿಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.ಇನ್ನು ಅತ್ಯಾಚಾರಕ್ಕೆ ಸಹಕರಿಸಿದ ಮುನಿಕೃಷ್ಣ ಹಾಗೂ ವೆಂಕಟೇಶಪ್ಪರನ್ನು ಖುಲಾಸೆ ಮಾಡಿದ್ದು ಸಂತ್ರಸ್ತೆಗೆ 1 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ಸೂಚನೆ ಕೊಟ್ಟಿದೆ.