ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಟ್ಟುಹಬ್ಬ ಆಚರಣೆಗೆ 13 ಸದಸ್ಯರ ಭಾಗಿ: ನಾರ್ವೆ ಪ್ರಧಾನಿಗೆ 1.75 ಲಕ್ಷ ದಂಡ ವಿಧಿಸಿದ ಪೊಲೀಸರು!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಾನೂನಿನ ಮುಂದೆ ಎಲ್ಲರೂ ಸಮಾನರು. ಇಲ್ಲಿ ಅವರು ಪ್ರಧಾನಿ,ಇವರು ಸಾಮಾನ್ಯ ಜನತೆ ಎಂಬ ಭಾವನೆ ಇಲ್ಲ.
ಹೌದು,ಇಲ್ಲಿ ಕೊರೋನಾ ನಿಯಂತ್ರಣಕ್ಕಾಗಿನ ಅಂತರ ಕಾಯ್ದುಕೊಳ್ಳುವ ನಿಯಮ ಉಲ್ಲಂಘಿಸಿದ್ದಕ್ಕಾಗಿ ನಾರ್ವೆ ಪ್ರಧಾನಿ ಎರ್ನಾ ಸೋಲ್‌ಬರ್ಗ್‌ ಅವರಿಗೆ ಅಲ್ಲಿನ ಪೊಲೀಸರು ದಂಡ ವಿಧಿಸಿದ್ದಾರೆ.
ಹುಟ್ಟುಹಬ್ಬ ಆಚರಣೆಗಾಗಿ ಕೌಟುಂಬಿಕ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಪ್ರಧಾನಿ ಸೋಲ್‌ಬರ್ಗ್‌ ಅವರಿಗೆ ₹ 1.75 ಲಕ್ಷ (20,000 ನಾರ್ವೆ ಕ್ರೋನ್ಸ್‌) ದಂಡ ವಿಧಿಸಿರುವುದಾಗಿ ಪೊಲೀಸ್‌ ಇಲಾಖೆ ಮುಖ್ಯಸ್ಥ ಓಲೆ ಸವೆರುಡ್ ಅವರು ತಿಳಿಸಿದ್ದಾರೆ.
ಪ್ರಧಾನಿ ಎರ್ನಾ ಅವರು ತಮ್ಮ 60ನೇ ಜನ್ಮದಿನದ ಆಚರಣೆ ಸಲುವಾಗಿ ಫೆಬ್ರವರಿ ಅಂತ್ಯದಲ್ಲಿ ಮೌಂಟೇನ್‌ ರೆಸಾರ್ಟ್‌ನಲ್ಲಿ ಎರಡು ದಿನ ಕಾರ್ಯಕ್ರಮ ಆಯೋಜಿಸಿದ್ದರು. ಹತ್ತಕ್ಕಿಂತ ಹೆಚ್ಚು ಜನರು ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಸರ್ಕಾರದ ಆದೇಶವಿದ್ದರೂ, ತಮ್ಮ ಕುಟುಂಬದ 13 ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡದ್ದರು. ಬಳಿಕ ಅವರು ಈ ಸಂಬಂಧ ಕ್ಷಮೆ ಕೋರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss