Thursday, July 7, 2022

Latest Posts

ಚತ್ತೀಸ್ ಗಢದಲ್ಲಿ ಶಸ್ತ್ರ ತ್ಯಜಿಸಿದ 13 ನಕ್ಸಲರು: ಇನಾಮು ಹೊಂದಿದ್ದ 96 ಮಂದಿ ಸೇರಿ 368 ಮಂದಿ ಶರಣು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಚತ್ತೀಸ್ ಗಢದ ಬಸ್ತಾರ್ ಪ್ರದೇಶದ 2 ಜಿಲ್ಲೆಗಳಲ್ಲಿ ಶುಕ್ರವಾರ ದಂಪತಿ ಸೇರಿ 13 ಮಂದಿ ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 8 ನಕ್ಸಲರು ಸುಕ್ಮಾ ಜಿಲ್ಲೆಯಲ್ಲಿ ಹಾಗೂ 5 ಮಂದಿ ನಕ್ಸಲರು ದಂತೇವಾಡದಲ್ಲಿ ಸಿಆರ್ ಪಿಎಫ್ ಹಾಗೂ ಪೊಲೀಸರಿಗೆ ಶರಣಾಗಿದ್ದಾರೆ.
ವಂಜಯ್ ಭೀಮಾ, ಆತನ ಪತ್ನಿ ಮಡವಿ ಕಲಾವತಿ, ರವಿ, ಕೋಸಾ, ದೇವಾ, ಡಿರ್ಡೋ ಗಂಗಾ, ಸೋಡಿ ದುಲಾ ಸೇರಿದಂತೆ ಒಟ್ಟು 13 ಮಂದಿ ಶರಣಾಗಿದ್ದು, ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಾದ ನಕ್ಸಲರಿಗೆ 2 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು. ಈವರೆಗೂ 368 ನಕ್ಸಲರು ಶರಣಾಗಿದ್ದು, ಅವರಲ್ಲಿ 96 ಮಂದಿ ಇನಾಮು ಹೊಂದಿದವರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss