ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಾರತದ 1300 ಸಿಮ್​ಕಾರ್ಡ್​ಗಳನ್ನು ಚೀನಾಕ್ಕೆ ಸಾಗಿಸಲಾಗಿದೆ: ಬಿಎಸ್​ಎಫ್​ ಎದುರು ಬಾಯಿಬಿಟ್ಟ ಬಂಧಿತ ಚೀನಿ ಪ್ರಜೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ 2 ವರ್ಷಗಳಲ್ಲಿ 1300 ಸಿಮ್​ಕಾರ್ಡ್​ಗಳನ್ನು ಚೀನಾಕ್ಕೆ ಸಾಗಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್​ಎಫ್) ಬಂಧಿಸಿರುವ ಚೀನಿ ಪ್ರಜೆ ಮಾಹಿತಿ ನೀಡಿದ್ದಾನೆ. ಶುಕ್ರವಾರ ಪಶ್ಚಿಮ ಬಂಗಾಳದ ಮಾಲ್ಡಾನಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಚೀನಿ ಪ್ರಜೆಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಹುಬೆ ಪ್ರಾಂತ್ಯದ ನಿವಾಸಿ ಹ್ಯಾನ್​ ಜುನ್ವೆ ಎಂದು ಗುರುತಿಸಲಾಗಿದ್ದು, ತನ್ನ ಸಹಚರ ಸುನ್ ಜಿಯಾಂಗ್ ಎಂಬಾತನನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಈ ಹಿಂದೆ ಬಂಧಿಸಿದ್ದರು ಎಂದು ಆರೋಪಿಯು ಬಿಎಸ್​ಎಫ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಈತ ಯಾವುದಾದರೂ ಗುಪ್ತಚರ ಇಲಾಖೆ ಅಥವಾ ಇತರ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದ್ದನೇ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಬಿಎಸ್​ಎಫ್ ಡಿಐಜಿ ಎಸ್​.ಎಸ್​.ಗುಲೇರಿಯಾ ಹೇಳಿದ್ದಾರೆ.
ಬಾಂಗ್ಲಾದೇಶಿ ಸಿಮ್​ಕಾರ್ಡ್, ಎರಡು ಪೆನ್​ಡ್ರೈವ್​ಗಳು, ಲ್ಯಾಪ್​ಟಾಪ್, ಎರಡು ಐಫೋನ್​, ಎಟಿಎಂ ಕಾರ್ಡ್​ಗಳು, ಅಮೆರಿಕ ಡಾಲರ್​ಗಳ ಜೊತೆಗೆ ಬಾಂಗ್ಲಾದೇಶಿ ಹಾಗೂ ಭಾರತೀಯ ಕರೆನ್ಸಿಯನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ. ಗುರುಗ್ರಾಮದಲ್ಲಿ ಸ್ಟಾರ್ ಸ್ಪ್ರಿಂಗ್ ಹೆಸರಿನ ಹೊಟೆಲ್ ಹೊಂದಿರುವುದಾಗಿ ಬಂಧಿತ ಹೇಳಿದ್ದಾನೆ. ಜೊತೆಗೆ ಈತ 2010ರ ನಂತರ ಕನಿಷ್ಠ 4 ಬಾರಿ ಭಾರತಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ ಎಂದು ಗುಲೇರಿಯಾ ಹೇಳಿದ್ದಾರೆ.
‘ತನ್ನ ಹೆಂಡತಿ ಜುನ್ವೆ ಕೆಲ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಾಗಿ ಜಿಯಾಂಗ್ ಒಪ್ಪಿಕೊಂಡಿದ್ದು, ಅವನ ಹೇಳಿಕೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ’ ಎಂದು ಬಿಎಸ್​ಎಫ್ ಹೇಳಿತ್ತು.
ಈ ಬೆಳವಣಿಗೆಯ ನಂತರ ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದರು.
ಇವರಿಗೆ ಭಾರತದ ವೀಸಾ ಸಿಗಲಿಲ್ಲ. ನೇಪಾಳ ಮತ್ತು ಬಾಂಗ್ಲಾದೇಶಗಳ ವೀಸಾ ಪಡೆದು ಅವರು ಭಾರತ ಪ್ರವೇಶಿಸಿದ್ದರು.ಈ ಬಗ್ಗೆ ತನಿಖೆ ನಡೆಯುತ್ತಿದೆ. ಇತರ ಗುಪ್ತಚರ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ. ಬಂಧಿತನ ಲ್ಯಾಪ್​ಟಾಪ್​ ಪರಿಶೀಲನೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ಗುಲೇರಿಯಾ ಮಾಹಿತಿ ನೀಡಿದರು.
ಮಾಲ್ಡಾ ಜಿಲ್ಲೆಯ ಮೂಲಕ ಗುರುವಾರ ಭಾರತ ಪ್ರವೇಶಿಸಿದ್ದ ಜಿಯಾಂಗ್​ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಬಿದ್ದಿದ್ದ. ಭದ್ರತಾ ಪಡೆಗಳು ಪ್ರಶ್ನಿಸಿದಾಗ ಓಡಿ ಹೋಗಲು ಯತ್ನಿಸಿದ. ಈ ವೇಳೆ ಅವನನ್ನು ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss