ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕಾರವಾರ:
ಅಮದಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮಚ್ಚಳ್ಳಿ ಮಜಿರೆಗೆ ರಸ್ತೆ ಇಲ್ಲದೆ ಅರೋಗ್ಯ ಸಮಸ್ಯೆ ಇದ್ದವರನ್ನು ಕಂಬಳಿ, ಕುರ್ಚಿಯ ಮೂಲಕ ಎತ್ತಿಕೊಂಡು ಬರುವಂತಾಗಿದ್ದು. ಕೂಡಲೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಮಚ್ಚಳ್ಳಿ ಗ್ರಾಮ ಅಮದಳ್ಳಿ ದಿಂದ ಸುಮಾರು ಆರು ಕಿ.ಮಿ. ದೂರದಲ್ಲಿದ್ದು. ಎತ್ತರಪ್ರದೇಶದಲ್ಲಿದೆ. ಇಲ್ಲಿಯ ಕುಟುಂಬಗಳು ಕ್ರಷಿ ಚಟುವಟಿಕೆ ನಡೆಸುತ್ತದ್ದಾರೆ. ಕಡುದಾದ ಕಾಲುದಾರು ಬಿಟ್ಟರೆ ರಸ್ತೆ ಸಂಪರ್ಕವಿಲ್ಲ. ಗ್ರಾಮದಲ್ಲಿ ಏನಾದರೂ ಆರೊಗ್ಯ ಸಮಸ್ಯೆ ಆದರೂ ಅವರನ್ನು ಹೆಗಲಮೇಲೆ ಹೊತ್ತೊ ತರುವ ಸ್ಥಿತಿ ಅವರದಾಗಿದೆ. ಒಂದೆರಡು ದಿನದ ಹಿಂದೆ ಆರೋಗ್ಯ ಸಮಸ್ಯೆ ಇದ್ದ ಮಹಿಳೆಯೋರ್ವಳನ್ನು ಈ ರೀತಿಯಲ್ಲಿ ತಂದು ಚಿಕಿತ್ಸೆ ನೀಡಲಾಗಿದೆ. ಕಾರಣ ರಸ್ತೆ ಸಂಪರ್ಕ ಕಲ್ಪಿಸುವ ಬಗ್ಗೆ ಮಚ್ಛಳ್ಳಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.