ದಿನಭವಿಷ್ಯ | ಕೌಟುಂಬಿಕ ಬದುಕು ಉಲ್ಲಾಸದಾಯಕ. ಇತರರ ಭಾವನೆಯನ್ನು ಗೌರವಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ವೃತ್ತಿಪರವಾಗಿ ಫಲಪ್ರದ ದಿನ. ಉದ್ಯೋಗ ಬದಲಾವಣೆಯ ಅವಕಾಶ ಸಿಗುವುದು. ಮನೆಯಲ್ಲಿ ಸೌಹಾರ್ದ ವಾತಾವರಣ, ಹೊಂದಿಕೆಯ ಬಾಳು.

ವೃಷಭ
ಕೌಟುಂಬಿಕ ಬದುಕು ಉಲ್ಲಾಸದಾಯಕ. ಇತರರ ಭಾವನೆಯನ್ನು ಗೌರವಿಸಿ ವ್ಯವಹರಿಸಿ. ಸಣ್ಣ ಕಾರಣಕ್ಕೆ ಯಾರಿಗೂ ನೋವುಂಟು ಮಾಡದಿರಿ.

ಮಿಥುನ
ಆಪ್ತರ ಜತೆಗೆ ಉತ್ತಮ ಹೊಂದಾಣಿಕೆ. ಪರಸ್ಪರ ಅರಿವು. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆರೋಗ್ಯದ ಕುರಿತಾದ ಚಿಂತೆ ಮಾಯವಾಗಿ, ನಿರಾಳತೆ ಮೂಡುವುದು.

ಕಟಕ
ಖಾಸಗಿ ಮತ್ತು ವೃತ್ತಿ ಬದುಕನ್ನು ಮಿಶ್ರ ಮಾಡಬೇಡಿ. ಅದರಿಂದ ಮಾನಸಿಕ ನೆಮ್ಮದಿ ದೂರವಾದೀತು. ಹೆತ್ತವರು ಮಕ್ಕಳ ಜತೆ ಸಹನೆಯಿಂದ ವರ್ತಿಸಿರಿ.

ಸಿಂಹ
ಬಾಕಿ ಉಳಿದ ಕಾರ್ಯ ಮುಗಿಸುವ ಮೂಲಕ ಮಾನಸಿಕ ನಿರಾಳತೆ. ಬೇರೆಯವರಿಂದ ಆರ್ಥಿಕ ನೆರವು. ಆರೋಗ್ಯದ ಕುರಿತು ಎಚ್ಚರ ವಹಿಸಿರಿ.

ಕನ್ಯಾ
ನಿಮ್ಮ ದಿನವಹಿ ಕೆಲಸದಲ್ಲೂ ಖುಶಿ ಕಾಣುವಂತಹ ದಿನವಿದು. ಯಾವುದೇ ಒತ್ತಡ ಬಾಧಿಸದು. ಎಲ್ಲವೂ ಸುಗಮ. ಬಂಧು ಭೇಟಿ.

ತುಲಾ
ಆರ್ಥಿಕ ಒತ್ತಡ ಕಾಡುವುದು. ಖರ್ಚು ಹೆಚ್ಚು. ಬೆನ್ನು ನೋವಿನಂತಹ ಸಮಸ್ಯೆ ಕಾಡಬಹುದು. ನೀವಿಂದು ವಿಶ್ರಾಂತಿ ಬಯಸುವಿರಿ.

ವೃಶ್ಚಿಕ
ನಿಮಗೆ ಉಲ್ಲಾಸ ತರುವಂತಹ ಬೆಳವಣಿಗೆ ಸಂಭವಿಸುವುದು. ಕುಟುಂಬ ಸಮ್ಮಿಲನವು ನಿಮ್ಮ ಒತ್ತಡ ಕಡಿಮೆ ಮಾಡುವುದು. ಆಪ್ತರ ಒಡನಾಟ.

ಧನು
ಮನೆಯಲ್ಲಿ ವಾಗ್ವಾದಕ್ಕೆ ಇಳಿಯಬೇಡಿ. ಶಾಂತಿ, ಸಹನೆ ಕಾಪಾಡಿ. ಅಜೀರ್ಣದಂತಹ ಸಮಸ್ಯೆ ಕಾಡಬಹುದು.  ಕೆಲವರು ನಿಮ್ಮ ಉದ್ವಿಗ್ನತೆ ಹೆಚ್ಚಿಸುವರು.

ಮಕರ
ನಿಮಗೆ ಅನುಕೂಲ ಆಗುವ ರೀತಿಯಲ್ಲಿ ಇಂದಿನ ಕಾರ್ಯಕ್ರಮ ಹೊಂದಿಸಿ. ಇಲ್ಲವಾದರೆ ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ಕೌಟುಂಬಿಕ ಭಿನ್ನಮತ.

ಕುಂಭ
ಖಾಸಗಿ ಬದುಕಿನಲ್ಲಿ ಹೆಚ್ಚು ಎಚ್ಚರ  ವಹಿಸಿ. ಅತಿಯಾದ ಹೊಣೆ ಹೆಗಲೇರುವುದು. ಸರಿಯಾಗಿ ನಿಭಾಯಿಸಿ. ಸಿಡುಕು ನಿಮ್ಮ ದಿನ ಹಾಳು ಮಾಡಬಹುದು.

ಮೀನ
ನೀವು ಬಯಸಿದಂತೆ ದಿನ ಸಾಗದು. ಸಣ್ಣ ಮಟ್ಟಿನ ಹಿನ್ನಡೆ ಅನುಭವಿಸುವಿರಿ. ವೃತ್ತಿಯಲ್ಲಿ ನಿಮ್ಮಿಂದ ತಪ್ಪು ಘಟಿಸಲೂ ಬಹುದು, ಎಚ್ಚರವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!