Wednesday, June 29, 2022

Latest Posts

ನಾಳೆ ಸೈಂಟ್ ಮೇರೀಸ್ ನಿಂದ ಮಲ್ಪೆ ಕಡಲ ಕಿನಾರೆ ತನಕ ಈಜಲಿದ್ದಾರೆ ಈ 14 ಮಂದಿ!

ಹೊಸದಿಗಂತ ವರದಿ, ಉಡುಪಿ:

ಇಲ್ಲಿನ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ನಿತ್ಯ ಈಜುವ ಯುವಕರು ಹೊಸ ಸಾಹಸವೊಂದಕ್ಕೆ ಮುಂದಾಗಿದ್ದಾರೆ. ಕರಂಬಳ್ಳಿ ಸ್ವಿಮ್ಮರ್ಸ್ ತಂಡದ 14 ಜನ ಸದಸ್ಯರು ನಾಳೆ (ಏ. 14) ಬೆಳಗ್ಗೆ 6.30ಕ್ಕೆ ಮಲ್ಪೆಯ ಸೈಂಟ್ ಮೇರೀಸ್ ದ್ವೀಪದಿಂದ ಮಲ್ಪೆ ಕಡಲ ಕಿನಾರೆವರೆಗೆ ಈಜಲಿದ್ದಾರೆ.

ಸಮುದ್ರಕ್ಕೆ ಕಸ, ಕಲ್ಮಶ ಎಸೆಯದೇ ಪರಿಸರ ರಕ್ಷಣೆಯ ಸಂದೇಶ ಸಾರಲು ಕಡಲಿನಲ್ಲಿ 3.09 ಕಿ.ಮೀ ದೂರವನ್ನು ಅಂದಾಜು 2 ತಾಸುಗಳಲ್ಲಿ ಕ್ರಮಿಸಲಿದ್ದಾರೆ.

ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಸಂಜೆ ಈಜಾಡುವ, ಆಸಕ್ತರಿಗೆ ಈಜು ಕಲಿಸುವ ಈ ತಂಡದಲ್ಲಿ ನಾಲ್ಕರ ಹರೆಯದ ಪುಟಾಣಿಗಳಿಂದ ಹಿಡಿದು 70 ವರ್ಷ ಪ್ರಾಯದ ಹಿರಿಯರೂ ಜೊತೆಗಿದ್ದಾರೆ. ಎಲ್ಲರಿಗೂ ಉಚಿತ ತರಬೇತಿ ನೀಡುತ್ತಿದ್ದಾರೆ. ಈಜಿನ ಜೊತೆಗೆ ಕೆರೆಯ ಸ್ವಚ್ಛತೆ, ನೀರು, ಪರಿಸರದ ಸಂರಕ್ಷಣೆಯಲ್ಲೂ ಕರಂಬಳ್ಳಿ ಸ್ವಿಮ್ಮರ್ಸ್ ಭಾಗಿಯಾಗುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss