ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತೀಯ ಬ್ಯಾಂಕುಗಳಿಂದ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮ ವಿಜಯ್ ಮಲ್ಯ ಅವರನ್ನು ಬ್ರಿಟನ್ ನ್ಯಾಯಾಲಯ ‘ದಿವಾಳಿ’ಯೆಂದು ಘೋಷಿಸಿದ ಬೆನ್ನಲ್ಲೇ, ಸಾಲಗಾರರು ನನ್ನನ್ನು ದಿವಾಳಿಯಾಗಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ವಿಜಯ್ ಮಲ್ಯ, 6,200 ಕೋಟಿ ರೂ ಸಾಲಕ್ಕಾಗಿ ಸರ್ಕಾರದ ಬ್ಯಾಂಕುಗಳ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ ನನ್ನ 14,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಡಿಗೆ 9 ಸಾವಿರ ಕೋಟಿ ರೂ ಸಾಲದ ಹಣವನ್ನು ಮರುಪಡೆಯುವ ಹಾಗೂ 5 ಸಾವಿರ ಕೋಟಿಗೂ ಅಧಿಕ ಭದ್ರತೆಯನ್ನು ಉಳಿಸಿಕೊಳ್ಳುತ್ತವೆ. ಬ್ಯಾಂಕುಗಳು ನನ್ನನ್ನು ದಿವಾಳಿಯಾಗುವಂತೆ ನ್ಯಾಯಾಲಯವನ್ನು ಕೇಳುತ್ತವೆ. ಏಕೆಂದರೆ ಅವರು ಹಣವನ್ನು ಇಡಿಗೆ ಹಿಂದಿರುಗಿಸಬೇಕಾಗಬಹುದು ಎಂದು ಮಲ್ಯ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಘೋಷಿಸುವ ತೀರ್ಪನ್ನು ಯುಕೆ ಹೈಕೋರ್ಟ್ ಅಂಗೀಕರಿಸಿದೆ ಎಂದು ಯುಕೆ ಹೈಕೋರ್ಟ್ನ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿತ್ತು. ಇದು ಭಾರತೀಯ ಬ್ಯಾಂಕುಗಳ ಒಕ್ಕೂಟಕ್ಕ ಸಿಕ್ಕ ಒಂದು ದೊಡ್ಡ ವಿಜಯವೆಂದು ಪರಿಗಣಿಸಲಾಗುತ್ತಿದೆ.
ನ್ಯಾಯಾಲಯ ನೀಡಿರುವ ದಿವಾಳಿತನದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಯಾವುದೇ ಹಕ್ಕನ್ನು ಮಲ್ಯ ಅವರಿಗೆ ನಿರಾಕರಿಸಲಾಗಿದೆ.