Thursday, August 11, 2022

Latest Posts

14 ವರ್ಷದ ಬಾಲಕನ ಮರ್ಮಾಂಗಕ್ಕೆ ಚಿತ್ರಹಿಂಸೆ ನೀಡಿ, ಕೊಲೆ

ಹೊಸದಿಗಂತ ವರದಿ, ಕಲಬುರಗಿ:

ಅನ್ಯ ಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ 14 ವರ್ಷದ ಬಾಲಕನ ಮರ್ಮಾಂಗಕ್ಕೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಮಹೇಶ್ ಎಂಬ ಬಾಲಕ ಅದೇ ಗ್ರಾಮದ ಅನ್ಯಕೋಮಿನ ಹಾಗೂ ವಯಸ್ಸಲ್ಲಿ ತನಗಿಂತ ಹಿರಿಯಳಿದ್ದ ಯುವತಿಯನ್ನ ಪ್ರೀತಿ ಮಾಡುತ್ತಿದ್ದ. ಜೊತೆಗೆ ಆಕೆಗೆ ಹೊಸ ಮೊಬೈಲ್‌ ಅನ್ನು ಸಹ ಕೊಡಿಸಿದ್ದ.. ಆದರೆ ಇಬ್ಬರ ಪ್ರೀತಿಗೆ ಯುವತಿ ತಾಯಿಯ ಪರಿಚಯಸ್ಥ ಮೆಹಬೂಬ್ ಎಂಬಾತ ಅಡ್ಡಗಾಲು ಹಾಕಿದ್ದ.

ಪ್ರೀತಿ ಮಾಡಬೇಡಿ ಎಂದು ಮೆಹಬೂಬ್ ಎಷ್ಟು ಸಾರಿ ಹೇಳಿದರು, ಇಬ್ಬರು ಪ್ರೀತಿ ಮುಂದುವರಿಸಿದ್ದರು. ಆದರೆ ಇದು ಹೆಚ್ಚಾದಂತೆ ಮೆಹಬೂಬ್ ತನ್ನ ಸ್ನೇಹಿತರ ಜೊತೆಗೂಡಿ ಬಾಲಕ ಮಹೇಶನನ್ನ ಹಿಡಿದುಕೊಂಡು ಹೋಗಿ ಮರ್ಮಾಂಗಕ್ಕೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಅಲ್ಲದೇ ಕತ್ತು ಹಿಸುಕಿ ಯುವಕನನ್ನು ಕೊಲೆ ಮಾಡಿದ್ದಾರೆ.

ಬಳಿಕ ಶವವನ್ನ ಚೀಲದಲ್ಲಿ ಹಾಕಿ ನರಿಬೋಳ-ಚಾಮನೂರ ಭೀಮಾ ನದಿಯಲ್ಲಿ ನಿರ್ಮಾಣವಾಗುತಿರುವ ಬ್ರೀಡ್ಜ್ ಕೆಳಗೆ ಶವ ಬಿಸಾಕಿದ್ದಾರೆ. ಆದರೆ ಇತ್ತ ಬಾಲಕ‌ ಮಹೇಶ್ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ.

ನಿನ್ನೆ ಜೇವರ್ಗಿ ಠಾಣೆ ಪೊಲೀಸರು ಹುಡುಕಾಟ ನಡಸುತ್ತಿರುವಾಗ ಅಪರಿಚಿತ ಶವ ಪತ್ತೆಯಾಗಿದೆ. ತನಿಖೆ ನಡೆಸಿದ ಪೊಲೀಸರು, ಅಪರಿಚಿತ ಶವವಲ್ಲ ಅದು, ನರಿಬೋಳ ಗ್ರಾಮದ ಬಾಲಕ ಮಹೇಶ ಎಂಬುವವರದ್ದು ಎಂದು ಹೇಳಿದ್ದಾರೆ.

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss