spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೌರಶಕ್ತಿ ಮೂಲಕ ಇಸ್ತ್ರಿ ಮಾಡುವ ತಂತ್ರಜ್ಞಾನ: ಇಕೋ ಆಸ್ಕರ್’ಗೆ 14 ವರ್ಷದ ವಿನಿಷಾ ಹೆಸರು ನಾಮನಿರ್ದೇಶನ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸೌರಶಕ್ತಿ ಮೂಲಕ ಇಸ್ತ್ರಿ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ತಮಿಳುನಾಡಿನ 14 ವರ್ಷದ ವಿನಿಷಾ ಉಮಾಶಂಕರ್ ‘ಇಕೋ ಆಸ್ಕರ್’ ಅವಾರ್ಡ್ ಗೆ ನಾಮ ನಿರ್ದೇಶನಗೊಂಡಿದ್ದಾಳೆ.
ಶಾಲೆಗೆ ಹೋಗುವಾಗ ಇದ್ದಿಲಿನಿಂದ ಬಟ್ಟೆ ಇಸ್ತ್ರಿ ಮಾಡುವುದನ್ನು ಗಮನಿಸಿದ್ದಳು. ಇದರಿಂದ ಪರಿಸರಕ್ಕೆ ಆಗುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ತಿಳಿದಳು. ಬಳಿಕ ವಿನಿಷಾ ಸೂರ್ಯನ ಬೆಳಕಿನಿಂದ ಇಸ್ತ್ರಿ ವಾಹನ ಮಾಡುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾಳೆ.

ಇದು 6 ಗಂಟೆಗಳ ಕಾಲ ಕೆಲಸ ಮಾಡಲಿದೆ. ಇದರ ಮೇಲ್ಭಾಗದಲ್ಲಿ ಚಾರ್ಜಿಂಗ್ ಡಾಕ್ ಕೂಡ ಇದೆ. ಈ ತಂತ್ರಜ್ಞಾನ ವಿಶ್ವಸಂಸ್ಥೆ ನಿಗದಿಪಡಿಸಿದ 15 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಬರೋಬ್ಬರಿ 13 ಗುರಿಗಳನ್ನು ಪೂರ್ಣಗೊಳಿಸಲಿದೆ ಎಂದು ವರದಿ ತಿಳಿಸಿದೆ.
ಈ ವರ್ಷ ವಿನಿಷಾ ಹೆಸರು ಇಕೋ ಆಸ್ಕರ್ ಪಟ್ಟಿಯಲ್ಲಿದ್ದು, ಅ.17 ರಂದು ಲಂಡನ್‌ ನ ಅಲೆಕ್ಸಾಂಡ್ರಾ ಅರಮನೆಯಲ್ಲಿ ಪ್ರಿನ್ಸ್ ವಿಲಿಯಂ ಅವರ ಭಾಷಣದೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss