ಹೊಸದಿಗಂತ ಆನ್ಲೈನ್ ಡೆಸ್ಕ್:
ಸ್ವಾಯತ್ತ ಡ್ಯಾನಿಶ್ ಪ್ರದೇಶವಾದ ಫಾರೋ ದ್ವೀಪದಲ್ಲಿ ಡಾಲ್ಫಿನ್ ಬೇಟೆಯಾಡಿದ್ದು, 1,400ಕ್ಕೂ ಹೆಚ್ಚು ಡಾಲ್ಫಿನ್ಗಳು ಮೃತಪಟ್ಟಿವೆ.
ಬೇಟೆ ಹೆಸರಿನಲ್ಲಿ ಡಾಲ್ಫಿನ್ಗಳ ಮಾರಣಹೋಮ ನಡೆದಿದ್ದು, ಈ ಬಗ್ಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ.
ಉತ್ತರ ದ್ವೀಪಸಮೂಹದಲ್ಲಿ ಒಂದೇ ದಿನ 1,400ಕ್ಕೂ ಹೆಚ್ಚು ಡಾಲ್ಫಿನ್ಗಳನ್ನು ಕೊಲ್ಲಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರಕ್ತಸಿಕ್ತವಾಗಿ ಒದ್ದಾಡುತ್ತಿರುವ ಡಾಲ್ಫಿನ್ಗಳ ಫೋಟೊ, ವಿಡಿಯೋಗಳು ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈಗಿನ ಕಾಲದಲ್ಲೂ ಪ್ರಾಣಿಗಳನ್ನು ಬೇಟೆಯಾಡುವುದು ಕೆಟ್ಟ ಅಭ್ಯಾಸ ಎಂದು ಪ್ರಾಣಿಪ್ರಿಯರು ಬೇಸರಿಸಿಕೊಂಡಿದ್ದಾರೆ.