Monday, August 8, 2022

Latest Posts

15 ವರ್ಷ ಹಳೆಯದಾದ ವಾಹನ ನಿಮ್ಮಲ್ಲಿದೆಯೇ? ಹಾಗಾದರೆ ಗುಜರಿಗೆ ಹಾಕೋದಕ್ಕೆ ರೆಡಿಯಾಗಿ!!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

15 ವರ್ಷ ಹಳೆಯದಾದ ವಾಹನಗಳು ಸಂಚಾರಕ್ಕೆ ಯೋಗ್ಯವಲ್ಲ, ಇಂತಹ ವಾಹಗಳನ್ನು ಬಳಕೆ ಮಾಡದಂತೆ ಮಾಡುವ ನಿರೀಕ್ಷಿತ ನೀತಿಗೆ ಸರ್ಕಾರದಿಂದ ಶೀಘ್ರದಲ್ಲಿಯೇ ಆದೇಶ ದೊರೆಯಲಿದೆ.

ಕೇಂದ್ರ ಸಂಸ್ಥೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಾಹಿತಿ ನೀಡಿದ್ದು, ನಾವು ಈಗಾಗಲೇ 15 ವರ್ಷದ ಹಳೆಯ ವಾಹನ ಸಂಚಾರಕ್ಕೆ ಯೋಗ್ಯವಲ್ಲವೆಂಬ ಹೊಸ ನೀತಿಗೆ ಸಚಿವಾಲಯದಿಂದ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ.  ಈ ರದ್ದಿ ನೀತಿಗೆ ಆದಷ್ಟು ಬೇಗ ಅನುಮೋದನೆ ಯನ್ನು ಪಡೆಯಬಹುದೆಂದು ನಿರೀಕ್ಷಿಕೆಯಿದೆ ಎಂದಿದ್ದಾರೆ.

ವಿದ್ಯುತ್ ವಾಹನಗಳನ್ನು ಅಳವಡಿಸಿಕೊಳ್ಳಲು ಮತ್ತು ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಅನುಮತಿಸಲು 2019 ರ ಜುಲೈ 26 ರಂದು ಸರ್ಕಾರವು ಮೋಟಾರು ವಾಹನಗಳ ಮಾನದಂಡಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss