Sunday, August 14, 2022

Latest Posts

ಕಿಡಿಗೇಡಿಗಳ ದುಷ್ಕ್ರತ್ಯಕ್ಕೆ 15 ಎಕರೆ ಕಾಡು ನಾಶ

ಹೊಸ ದಿಗಂತ ವರದಿ, ಮೈಸೂರು:

ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ 15ಕ್ಕೂ ಹೆಚ್ಚು ಎರಕೆ ಕಾಡು ಪ್ರದೇಶ ನಾಶವಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ಕೊಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿಹಚ್ಚಿದ್ದರಿoದ, ಬೆಟ್ಟದ ಮರ, ಗಿಡ, ಸಸಿಗಳು ಭಸ್ಮವಾಗಿವೆ. ಬೆಂಕಿ ಕಾಣಿಸಿಕೊಂಡಿದ್ದರಿoದ ಕಾಡು ಪ್ರಾಣಿಗಳು ದಿಕ್ಕಪಾಲಾಗಿ ಓಡಿ ಹೋಗಿವೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ದಳದವರು ನಿರಂತರ ಪ್ರಯತ್ನ ನಡೆಸಿ, ಕೊನೆಗೂ ಬೆಂಕಿಯನ್ನು ನಂದಿಸಿದ್ದು, ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss