Friday, August 19, 2022

Latest Posts

ಮಣಪ್ಪುರಂ ಫೈನಾನ್ಸ್‌ ನಿಂದ 15 ಕೆ.ಜಿ. ಚಿನ್ನ, 5 ಲಕ್ಷ ರೂ. ದರೋಡೆ: ಪೊಲೀಸರ ಗುಂಡಿಗೆ ಆರೋಪಿಗಳಿಬ್ಬರು ಬಲಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಆರು ಶಸ್ತ್ರಸಜ್ಜಿತ ದರೋಡೆಕೋರರು ಉತ್ತರ ಪ್ರದೇಶದ ಕಮಲಾ ನಗರದಲ್ಲಿರುವ ಮಣಪ್ಪುರಂ ಫೈನಾನ್ಸ್‌ ಶಾಖೆಯಿಂದ ಸುಮಾರು 15 ಕೆ.ಜಿ. ಚಿನ್ನ ಮತ್ತು 5 ಲಕ್ಷ ರೂ. ದರೋಡೆ ಮಾಡಿದ್ದಾರೆ.

ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಈ ವೇಳೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ದರೋಡೆ ಕೋರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮುಖವಾಡ ಧರಿಸಿ ಆರು ಜನ  2 ಗಂಟೆಯ ಸುಮಾರಿಗೆ ಮಣಪ್ಪುರಂ ಫೈನಾನ್ಸ್‌ ಕಚೇರಿಗೆ ನುಗ್ಗಿ ಅಲ್ಲಿದ್ದ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ 15 ಕೆ.ಜಿ. ಚಿನ್ನ ಮತ್ತು 5 ಲಕ್ಷ ರೂ. ದೋಚಿದ್ದಾರೆ.

ಆಗ್ರಾ ಐಜಿ ನವೀನ್ ಅರೋರಾ ನೀಡಿರು ಮಾಹಿತಿ ಪ್ರಕಾರ, ಚಿನ್ನ, ಹಣ ದೋಚಿಕೊಂಡು  ಆರೋಪಿಗಳು ಖಂಡೋಲಿ-ಎಟ್ಮಾಡಪುರದಲ್ಲಿರುವ ಮೆಡಿಕಲ್ ಅಂಗಡಿಯಲ್ಲಿ ಅಡಗಿದ್ದಾರೆಂಬ ಮಾಹಿತಿ ದೊರಕಿತು. ಅಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳನಕ್ಕೆ ಪ್ರಯತ್ನಿಸಿದ ಇಬ್ಬರ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರನ್ನು ಫಿರೋಜಾಬಾದ್ ನಿವಾಸಿಗಳಾದ ಮನೀಷ್ ಪಾಂಡೆ ಮತ್ತು ನಿರ್ದೋಷ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತರಿಂದ 7.5 ಕೆ.ಜಿ ಚಿನ್ನ ಹಾಗೂ 1.5 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ತಕ್ಷಣ ಕಾರ್ಯ ಪ್ರವೃತರಾಗಿ ಎನ್‌ಕೌಂಟರ್ ನಡೆಸಿದ ಪೊಲೀಸ್ ತಂಡಕ್ಕೆ ಎಡಿಜಿ  ರಾಜೀವ್ ಕೃಷ್ಣ ಅವರು 1 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!