ಜಾರ್ಖಂಡ್‌: 15 ವರ್ಷದ ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ

ಹೊಸದಿಗಂರತ ಡಿಜಿಟಲ್‌ ಡೆಸ್ಕ್‌
ಜಾರ್ಖಂಡ್‌ನ ರಾಂಚಿಯಲ್ಲಿ 15 ವರ್ಷದ ಬಾಲಕಿಯನ್ನು ಐವರು ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಬುಧವಾರ ರಾತ್ರಿ ಆರೋಪಿಗಳು ಧುರ್ವಾದ ರಿಂಗ್ ರೋಡ್‌ನಿಂದ ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡರು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಪೊಲೀಸರ ಗಸ್ತು ತಂಡವು ರತು ಪೊಲೀಸ್ ಠಾಣೆ ವ್ಯಾಪ್ತಿಯ ದಲಾದಲಿಯ ರೆಸ್ಟೋರೆಂಟ್ ಬಳಿ ರಸ್ತೆಬದಿಯಲ್ಲಿ ಕಾರನ್ನು ಪತ್ತೆ ಮಾಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ರಾಂಚಿ-ಗ್ರಾಮೀಣ) ನೌಶಾದ್ ಆಲಂ ಪಿಟಿಐಗೆ ತಿಳಿಸಿದ್ದಾರೆ.
ಕಾರಿನಲ್ಲಿ ಏನೋ ಕಾನೂನುಬಾಹಿರ ಕೃತ್ಯ ನಡೆಯುತ್ತಿದೆ ಎಂದು ಶಂಕಿಸಿ, ಪೊಲೀಸರು ಕಾರನ್ನು ಪರಿಶೀಲಿಸಲು ಹೋದಾಗ, ಐದು ಪುರುಷರೊಂದಿಗೆ ಅಳುತ್ತಿದ್ದ ಹುಡುಗಿ ಕಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ 20 ವರ್ಷದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!