ಹಾರಾಟದ ಮಧ್ಯೆ ಕೈಕೊಟ್ಟ ಎಂಜಿನ್, ಪವಾಡ ಸದೃಶ ರೀತಿಯಲ್ಲಿ ಪಾರಾದ 150 ಪ್ರಯಾಣಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್ ಗಾಳಿಯಲ್ಲಿ ವಿಫಲವಾದಾಗ ಪೈಲಟ್ ನ ಸಮಯಪ್ರಜ್ಞೆಯಿಂದ ಅದರಲ್ಲಿದ್ದ 150 ಕ್ಕೂ ಹೆಚ್ಚು ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ.

ಪೈಲಟ್ ಮತ್ತೊಂದು ಎಂಜಿನ್ ಬಳಸಿ ವಿಮಾನವನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ. ಭಾನುವಾರ ರಾತ್ರಿ ಟೇಕಾಫ್ ಆದ ವಿಮಾನ ಸೋಮವಾರ ಮುಂಜಾನೆ ದೆಹಲಿ ತಲುಪಿತ್ತು. ವಿಮಾನ ಸಂಖ್ಯೆ ಎಐ 2820, A320 ನಿಯೋ ಮಾಡೆಲ್, ಕೆಂಪೇಗೌಡ ಅಂತಾರಾಷ್ಟ್ರೀ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ರಾತ್ರಿ 7:09 ಕ್ಕೆ ಟೇಕ್ ಆಫ್ ಆಗಬೇಕಿತ್ತು, ಅದು ಸಂಜೆ 5:45 ಕ್ಕೆ ಟೇಕ್ ಆಫ್ ಆಗಬೇಕಿತ್ತು. ಆಕಾಶದಲ್ಲಿ ಮಧ್ಯೆ ಸಮಸ್ಯೆಗಳನ್ನು ಎದುರಿಸಿದ ನಂತರ, ರಾತ್ರಿ 8:10 ಕ್ಕೆ ವಿಮಾನ ನಿಲ್ದಾಣಕ್ಕೆ ಮರಳಿತು.

ಏರ್‌ ಟ್ರಾಫಿಕ್‌ ಕಂಟ್ರೋಲ್‌ ಮೂಲಗಳು ವಿಮಾನದ ಒಂದು ಇಂಜಿನ್‌ ಗಾಳಿಯಲ್ಲಿದ್ದಾಗ ವಿಫಲವಾಗಿದೆ ಎಂದು ಖಚಿತಪಡಿಸಿವೆ. ರಾತ್ರಿಯೇ ವಿಮಾನ ನಿಲ್ದಾಣಕ್ಕೆ ಧಾವಿಸಿದ ಪೊಲೀಸರು ಕೂಡ ಇದನ್ನು ದೃಢಪಡಿಸಿದ್ದಾರೆ. ಏರ್ ಇಂಡಿಯಾ ಇದನ್ನು ಕಾರ್ಯಾಚರಣೆ ಸಮಸ್ಯೆ ಎಂದು ಹೇಳಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!