SHOCKING NEWS| ಬೆಂಕಿಯ ರೌದ್ರಾವತಾರಕ್ಕೆ 150 ಅಂಗಡಿಗಳು ಸುಟ್ಟು ಕರಕಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಸ್ಸಾಂನ ಜೋರ್ಹತ್‌ನ ಚೌಕ್ ಬಜಾರ್‌ನಲ್ಲಿರುವ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಸುತ್ತಮುತ್ತಲಿನ ಪ್ರದೇಶಗಳಿಗೂ ವ್ಯಾಪಿಸಿ ಭಾರಿ ಬೆಂಕಿ ಅವಘಡ ಉಂಟಾಗಿದೆ.

ಪ್ರದೇಶದಾದ್ಯಂತ ದಟ್ಟ ಹೊಗೆ ಆವರಿಸಿ ಒಟ್ಟು 150 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

20 ಅಗ್ನಿಶಾಮಕ ಯಂತ್ರಗಳೊಂದಿಗೆ ಅಗ್ನಿಶಾಮಕ ದಳದವರು ಗಂಟೆಗಟ್ಟಲೆ ಶ್ರಮಿಸಿ ಬೆಂಕಿ ನಂದಿಸಿದರು. ಅಪಘಾತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕವಾಗಿ ಗುರುತಿಸಲಾಗಿತ್ತು. ಅಪಘಾತದಿಂದ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಬೆಂಕಿ ಅವಘಡದಿಂದ ಸ್ಥಳೀಯರು ಭಯಭೀತರಾಗಿದ್ದರು. ತಮಗಾಗಿರುವ ನಷ್ಟಕ್ಕೆ ಅಂಗಡಿ ಮಾಲೀಕರು ಕಣ್ಣೀರಾಕಿದ್ದು ಪರಿಹಾರ ಒದಗಿಸುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!