ಮಧ್ಯಪ್ರದೇಶದಲ್ಲಿ 155 ಎಂಜಿನಿಯರಿಂಗ್ ಕಾಲೇಜುಗಳಿಗೆ ಬಿತ್ತು ಬೀಗ: ಕಾರಣ ಏನು ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದಲ್ಲಿ ಬರೊಬ್ಬರಿ 155 ಕಾಲೇಜುಗಳನ್ನು ಮುಚ್ಚಲ್ಪಟ್ಟಿವೆ, ಅದರಲ್ಲಿ ರಾಜಧಾನಿ ಭೋಪಾಲ್ ನಗರವೊಂದರಲ್ಲೇ 60 ಕಾಲೇಜುಗಳಿಗೆ ಬೀಗ ಜಡಿಯಲಾಗಿದೆ.

ಪ್ರಮುಖವಾಗಿ ಭೋಪಾಲ್ ನ ರಾತಿಬಾದ್‌ನಲ್ಲಿರುವ ಗಾರ್ಗಿ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಕೂಡ ಸ್ಥಗಿತವಾಗಿದ್ದು, ಇದು ಒಂದು ಕಾಲದಲ್ಲಿ ಮಧ್ಯ ಪ್ರದೇಶದಲ್ಲಿ ನಾವೀನ್ಯತೆಗೆ ಹೆಸರುವಾಸಿಯಾಗಿತ್ತು.

ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಬಿ.ಟೆಕ್ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ, ಕ್ಯಾಂಪಸ್ ಅನ್ನು ಉದ್ಯಾನ ಮತ್ತು ರೆಸಾರ್ಟ್ ಕೊಠಡಿಗಳಾಗಿ ಪರಿವರ್ತಿಸಲು, ಪದವಿ ತರಗತಿಗಳನ್ನು ಆತಿಥ್ಯ ಸೇವೆಗಳೊಂದಿಗೆ ಬದಲಾಯಿಸಲು ಯೋಜನೆಗಳು ನಡೆಯುತ್ತಿವೆ.

ಅಂತೆಯೇ ಪ್ರಸಿದ್ಧ ಗ್ರೀಕ್ ಹೆಗ್ಗುರುತಿನ ಅಕ್ರೊಪೊಲಿಸ್ ಇನ್‌ಸ್ಟಿಟ್ಯೂಟ್ ಈಗ ಖಾಲಿಯಾಗಿದೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳ ಗದ್ದಲದ ಕ್ಯಾಂಪಸ್ ಇದೀಗ ವಿದ್ಯಾರ್ಥಿಗಳ ಬದಲು ಸ್ಕ್ರ್ಯಾಪ್ ಡೀಲರ್‌ಗಳ ತಾಣವಾಗಿದೆ. ಬ್ಯೂಟಿಷಿಯನ್ ತರಬೇತಿಯಂತಹ ಕಾರ್ಯಕ್ರಮಗಳನ್ನು ಸಹ ನಿಲ್ಲಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ 300 ರಿಂದ 140 ಕ್ಕೆ ಇಳಿದಿದೆ. ಸೀಟುಗಳು ಸಂಖ್ಯೆ ಕೂಡ 95,000 ರಿಂದ 71,000 ಕ್ಕೆ ಇಳಿದಿವೆ. ಈ ಕುಸಿತಕ್ಕೆ ಕಾರಣವಾಗುವ ಪ್ರಮುಖ ಅಂಶಗಳನ್ನೂ ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದ್ದು. ಈ ಪೈಕಿ ಹಳತಾದ ಪಠ್ಯಕ್ರಮ: ಉದ್ಯೋಗ-ಆಧಾರಿತ ಶಿಕ್ಷಣದ ಕೊರತೆ, ಉದ್ಯಮದ ಅಗತ್ಯಗಳೊಂದಿಗೆ ಹೊಂದಿಕೆಯಾಗದಿರುವ ಕೋರ್ಸ್‌ಗಳು, ಸಾಕಷ್ಟು ಕೌಶಲ್ಯ ಅಭಿವೃದ್ಧಿ ಕೊರತೆ ಮತ್ತು ಪ್ರಾಯೋಗಿಕ ಕೌಶಲ್ಯಗಳ ಮೇಲೆ ಸೀಮಿತ ಗಮನ, ಸಂಪನ್ಮೂಲ ನಿರ್ಬಂಧಗಳು, ಅರ್ಹ ಅಧ್ಯಾಪಕರು ಮತ್ತು ಸಾಕಷ್ಟು ಸಂಪನ್ಮೂಲಗಳ ಕೊರತೆ ಅಂತಿಮವಾಗಿ ಪ್ರಾಯೋಗಿಕ ಅನುಭವದ ಕೊರತೆ ಮತ್ತು ಕಾಗದದ ಮೇಲೆ ಮಾತ್ರ ಇರುವ ಸಂಶೋಧನೆ ಮತ್ತು ಇಂಟರ್ನ್‌ಶಿಪ್‌ಗಳು ಕಾಲೇಜುಗಳ ಕಣ್ಮರೆಗೆ ಕಾರಣ ಎಂದು ಹೇಳಲಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!