ಅಕ್ಟೋಬರ್‌ ಜಿಎಸ್‌ಟಿ ಆದಾಯದಲ್ಲಿ 16.6 ಶೇಕಡಾ ಏರಿಕೆ: 1.52 ಲಕ್ಷ ಕೋಟಿ ರೂಪಾಯಿ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಕ್ಟೋಬರ್‌ ತಿಂಗಳಿನ ಜಿಎಸ್‌ಟಿ ಸಂಗ್ರಹದಲ್ಲಿ ಶೇಕಡಾ 16.6 ರಷ್ಟು ಏರಿಕೆಯಾಗಿದ್ದು ಸುಮಾರು 1.52 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದು ಇದು ಇದುವರೆಗಿನ ಎರಡನೇ ಅತಿ ಹೆಚ್ಚು ಸಂಗ್ರಹವಾಗಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಈ ಹಿಂದೆ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ರೂ. ಗಳಷ್ಟಾಗಿತ್ತು. ಪ್ರಸ್ತುತ ಎರಡನೇ ಅತಿ ಹೆಚ್ಚು ಸಂಗ್ರಹವಾಗಿದೆ. ಈ ಆದಾಯವು ಕಳೆದ ವರ್ಷ ಅಕ್ಟೋಬರ್‌ನಲ್ಲಿ 1.30 ಲಕ್ಷ ಕೋಟಿ ರೂ.ಗಳಷ್ಟಿತ್ತು.

ಅಕ್ಟೋಬರ್ 2022 ರಲ್ಲಿ ಒಟ್ಟು 1,51,718 ಕೋಟಿ ರೂ. GST ಸಂಗ್ರಹಿಸಲಾಗಿದೆ. ಇದರಲ್ಲಿ ಕೇಂದ್ರ GST 26,039 ಕೋಟಿ ರೂ., ರಾಜ್ಯ GST ರೂ. 33,396 ಕೋಟಿ, ಇಂಟಿಗ್ರೇಟೆಡ್ GST ರೂ. 81,778 ಕೋಟಿ ರೂ.ಗಳಷ್ಟಿದೆ. ಸೆಸ್ 10,505 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ ರೂ. 825 ಕೋಟಿ ಸೇರಿದಂತೆ), ಇದು ಇಲ್ಲಿಯವರೆಗಿನ ಎರಡನೇ ಅತಿ ಹೆಚ್ಚು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಸತತ ಎಂಟು ತಿಂಗಳಿನಿಂದ ಜಿಎಸ್‌ಟಿ ಸಂಗ್ರಹವು 1.40 ಲಕ್ಷ ಕೋಟಿ ರೂ.ಗಳನ್ನು ಮೀರಿದೆ ಎಂಬುದು ಇಲ್ಲಿ ಉಲ್ಲೇಖನೀಯ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!