ದುಬೈ ವಸತಿ ಕಟ್ಟಡದಲ್ಲಿ ಅಗ್ನಿ ದುರಂತ: ನಾಲ್ವರು ಭಾರತೀಯರು ಸೇರಿ 16 ಮಂದಿ ಸಜೀವ ದಹನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಶ್ರೀಮಂತ ಗಲ್ಫ್ ಎಮಿರೇಟ್‌ನ ದುಬೈನಲ್ಲಿರುವ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಭಾರತೀಯರು ಸೇರಿ 16 ಜನರು ಸಾವನ್ನಪ್ಪಿದ್ದಾರೆ ಮತ್ತು 9 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಗರದ ಹಳೆಯ ಭಾಗದಲ್ಲಿರುವ ಅಲ್-ರಾಸ್ ನೆರೆಹೊರೆಯಲ್ಲಿರುವ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಇತರ ಪ್ರದೇಶಗಳಿಗೆ ವ್ಯಾಪಿಸಿದೆ ಎಂದು ಪತ್ರಿಕೆ ಹೇಳಿದೆ.

ನಾಗರಿಕ ರಕ್ಷಣಾ ಪಡೆಯ ಪ್ರಕಾರ ಕಟ್ಟಡದಲ್ಲಿ ಸುರಕ್ಷತೆ ಮತ್ತು ಭದ್ರತಾ ಕ್ರಮಗಳ ಅನುಸರಣೆಯ ಕೊರತೆಯಿಂದ ಬೆಂಕಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‍ನ ಏಳು ಎಮಿರೇಟ್‍ಗಳಲ್ಲಿ ಒಂದಾದ ದುಬೈ, ಸುಮಾರು 3.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ, ಅವರಲ್ಲಿ ಸುಮಾರು 90 ಪ್ರತಿಶತ ವಿದೇಶಿಯರು ವಾಸಿಸುತ್ತಿದ್ದಾರೆ. ಆದರೆ ಮೃತಪಟ್ಟವರ ರಾಷ್ಟ್ರೀಯತೆ ಬಹಿರಂಗಪಡಿಸಲು ದುಬೈ ನಿರಾಕರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!