ಹೊಸ ದಿಗಂತ ವರದಿ, ಬೀದರ:
ಕರ್ನಾಟಕ ಹಾಗೂ ತೆಲಂಗಾಣ ಗಡಿ ಪ್ರದೇಶದಲ್ಲಿರುವ ಸುಲ್ತಾನಪೂರ ಗ್ರಾಮದ ಸಮೀಪದ ಕಂಕರ ಮಷಿನ್ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಪೊಲೀಸರು ದಾಳಿ ನಡೆಸಿ, ಸ್ಫೋಟಕ್ಕೆ ಸಂಗ್ರಹಿಸಿಡಲಾಗಿದ್ದ ಸುಮಾರು 16 ಕ್ವಿಂಟಲ್ ಜಿಲೆಟಿನ್ ವಶ ಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರ ಗುರುನಾಥ ಕೊಳ್ಳೂರು ಅವರಿಗೆ ಸೇರಿದ ಜಿ.ಕೆ. ಕನಸ್ಟ್ರಕ್ಷನ್ ಅಡಿಯಲ್ಲಿ ನಡೆಯುತ್ತಿರುವ ಕಂಕರ ಮಷೀನ್ ಸೇರಿದೆ.
ರಾಜ್ಯದಲ್ಲಿ ಈಗಾಗಲೇ ಜಿಲೆಟಿನ್ ಸ್ಫೋಟ್ದಿಂದ ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪೂರ ಜಿಲ್ಲೆಗಳು ದೇಶಾದ್ಯಂತ ಸುದ್ದಿಯಲ್ಲಿದ್ದವು. ಈ ಘಟನೆಗಳು ನಡೆದ ಕುಡಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಜಿಲೆಟಿನ್ ಪತ್ತೆಗೆ ಆಯಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿತ್ತು.
ಈ ಹಿನ್ನ;ಲೆಯಲ್ಲಿ ಇಂದು ದಾಳಿ ನಡೆಸಿದ್ದ ಜಿಲ್ಲಾ ಪೊಲೀಸರು ಸುಲ್ತಾನಪೂರ ಗ್ರಾಮದ ಸಮೀಪದ ಕಂಕರ ಮಷಿನ್ ಮೇಲೆ ದಾಳಿ ನಡೆಸಿ ಸುಮಾರು 16 ಕ್ವಿಂಟಲ್ ಜಿಲೆಟಿನ್ ಕಡ್ಡಿಗಳು ವಶಪಡಿಸಿಕೊಂಡಿದೆ.