ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

16 ವರ್ಷದ ಹಿಂದಿನ ಕೊಲೆ ಪ್ರಕರಣ: ಬೀಜನಿಗಮದ ನಿರ್ದೇಶಕರಿಗೆ ಜೀವಾವಧಿ ಶಿಕ್ಷೆ

ಹೊಸ ದಿಗಂತ ವರದಿ, ಕೋಲಾರ:

ತಾಲೂಕಿನ ವಡಗೂರು ಗ್ರಾಮದಲ್ಲಿ ಕಳೆದ 16 ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣದ ತೀರ್ಪು ಇಂದು ಹೊರ ಬಂದಿದ್ದು, ನ್ಯಾಯಾಲಯ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಬೀಜ ನಿಗಮ ನಿರ್ದೇಶಕ ಡಿ.ಎಲ್.ನಾಗರಾಜ್ ಸೇರಿದಂತೆ ಆರು ಮಂದಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ.
ರಾಜಕೀಯ,ದ್ವೇಷ ಕಾರಣಗಳಿಗಾಗಿ ಕಳೆದ 16 ವರ್ಷಗಳ ಹಿಂದೆ 2006 ರ ಜುಲೈ 22 ರಂದು ವಡಗೂರು ಗ್ರಾಮದಲ್ಲಿ ನಡೆದಿದ್ದ ಈ ಜೋಡಿ ಕೊಲೆ ಪ್ರಕರಣದಲ್ಲಿ ಇದೇ ಗ್ರಾಮದ ದೊಡ್ಡಪ್ಪಯ್ಯ, ಜಯುರಾಮ್ ಇಬ್ಬರು ಕೊಲೆಯಾಗಿದ್ದರು.
ಈ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಈ ಸಂಬಂಧ ವಡಗೂರು ನಾಗರಾಜ್ ಸೇರಿದಂತೆ ಇತರೆ ಆರೋಪಿಗಳನ್ನು ಬಂಧಿಸಲಾಗಿತ್ತು ಆದರೆ ಅವರು ಜಾಮೀನು ಪಡೆದು ಹೊರ ಬಂದಿದ್ದರಾದರೂ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಮುಂದುವರೆದಿತ್ತು.
ಎಪಿಎಂಸಿ ಮಾಜಿ ಅಧ್ಯಕ್ಷ ಡಿಎಲ್.ನಾಗರಾಜ ಗುಂಪಿನ ದಾಳಿಯಿಂದ ದೊಡ್ಡಪ್ಪಯ್ಯ ಕೊಲೆಯಾಗಿದ್ದು, ನಂತರ ಸೋಮಶೇಖರ್ ಬಣದಿಂದ ಜಯರಾಂ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು ಎಂದು ಆರೋಪಿಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
16 ವರ್ಷಗಳ ವಿಚಾರಣೆಯ ನಂತರ ಇದೀಗ ಜೋಡಿ ಕೋಲೆ ಪ್ರಕರಣದ ತೀರ್ಪನ್ನು ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಧೀಶರಾದ ಪವನೇಶ್ ಪ್ರಕಟಿಸಿದ್ದು, ಡಿಎಲ್.ನಾಗರಾಜ ಸೇರಿದಂತೆ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ದೊಡ್ಡಪ್ಪಯ್ಯ ಕೊಲೆ ಪ್ರಕರಣದಲ್ಲಿ ಡಿಎಲ್.ನಾಗರಾಜ, ಗೋವಿಂದಪ್ಪ, ಮುನಿಬೈರಪ್ಪ, ಸೋಮಶೇಖರ ಹಾಗೂ ರೆಡ್ಡಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಜಯರಾಮ್ ಕೊಲೆ ಪ್ರಕರಣದಲ್ಲಿ ಸೋಮಶೇಖರಗೆ ಜೀವಾವಧಿ ಶಿಕ್ಷೆಯಾಗಿದೆ.
ಡಿ.ಎಲ್.ನಾಗರಾಜ್ ಮತ್ತು ಆರೋಪಿಗಳ ಪರವಾಗಿ ಅಭಿಯೋಜಕ ಚಂದ್ರಪ್ಪ, ಹಿರಿಯ ವಕೀಲರಾದ ಕೆ.ವಿ.ಶಂಕರಪ್ಪ,ಮಹಮದ್ ಹನೀಫ್ ವಾದಿಸಿದ್ದರು. ಕೊಲೆಯಾದ ಪೆದ್ದಪ್ಪಯ್ಯ ಕುಟುಂಬದ ಪರವಾಗಿ ವಕೀಲ ಕೋದಂಡಪ್ಪ, ಅಭಿಯೋಜಕರಾಗಿ ಲಕ್ಷ್ಮೀನಾರಾಯಣ ವಾದ ಮಂಡಿಸಿದ್ದರು. ಗ್ರಾಮಾಂತರ ಠಾಣೆ ಪೊಲೀಸರು ಒಟ್ಟು ೨೬ ಮಂದಿ ಆರೋಪಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದರು. ೪೬ ಸಾಕ್ಷಿಗಳನ್ನು ಪರಿಗಣಿಸಲಾಗಿತ್ತು.
ಈ ಪ್ರಕರಣದಲ್ಲಿ ಮೊದಲು ಸಾಕ್ಷಿಗಳಾಗಿದ್ದವರಲ್ಲಿ ಕೆಲವರು ವಿಚಾರಣೆ ಹಂತದಲ್ಲಿ ಸಾಕ್ಷ್ಯವನ್ನು ತಿರುಚಿದ್ದರು. ಇದರಿಂದ ಅನುಮಾನಗೊಂಡ ನ್ಯಾಯಾಲಯ ಎಲ್ಲಾ 46 ಸಾಕ್ಷಿಗಳಿಗೂ ನೋಟೀಸ್ ನೀಡಿ ಸಾಕ್ಷ್ಯ ದಾಖಲಿಸಿಕೊಂಡಿದ್ದು ಆಗ ಐದು ಮಂದಿ ಸುಳ್ಳು ಸಾಕ್ಷ್ಯ ಹೇಳಿದ್ದು, ಗಮನಕ್ಕೆ ಬಂದಿದ್ದು, ಆ 5 ಮಂದಿಯ ವಿರುದ್ದ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಸೂಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss