ಕೊರೊನಾ ವರದಿ: 24ಗಂಟೆಗಳಲ್ಲಿ 16ಸಾವಿರ ಹೊಸ ಪ್ರಕರಣಗಳು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 16,103 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ. ಒಂದು ದಿನದಲ್ಲಿ ಮಾರಣಾಂತಿಕ ಸೋಂಕಿಗೆ 31 ಮಂದಿ ಬಲಿಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,11,711 ಮತ್ತು ಸಕ್ರಿಯ ಪ್ರಕರಣಗಳ ಶೇಕಡಾವಾರು 0.26ರಷ್ಟು ಆಗಿದೆ.

ದೇಶದಲ್ಲಿ ಇದುವರೆಗೆ ವರದಿಯಾದ ಕರೋನಾ ಪ್ರಕರಣಗಳ ಸಂಖ್ಯೆ 4,35,02,429. ಕೊರೊನಾ ಸಾವಿನ ಸಂಖ್ಯೆ 5,25,199. ಕೊರೊನಾ ಚೇತರಿಕೆ ದರ 98.54 ಪ್ರತಿಶತ. ಇದುವರೆಗೆ ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 4,28,65,519 ಆಗಿದೆ. ಇದುವರೆಗೆ 197.95 ಕೋಟಿ ಲಸಿಕೆಗಳನ್ನು ಪೂರ್ಣಗೊಳಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!