spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

17ನೇ ಸ್ಥಾನಕ್ಕೆ ಏರಿದ ವಿದ್ಯಾಕಾಶಿ: 7,139 ವಿದ್ಯಾರ್ಥಿಗಳ ಅನುತ್ತೀರ್ಣ

- Advertisement -Nitte

ಧಾರವಾಡ: ಕೊರೋನಾ ಹಾವಳಿ ಮಧ್ಯೆಯೂ ಏಪ್ರೀಲ್ ತಿಂಗಳಲ್ಲಿ ನಡೆದ ಪದವಿಪೂರ್ವ ಶಿಕ್ಷಣ ಇಲಾಖೆಯ 2019-20ನೇ ಸಾಲಿನ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾಕಾಶಿ ಖ್ಯಾತಿಯ ಧಾರವಾಡ ಜಿಲ್ಲೆಯು ಈ ವರ್ಷ ಶೇ.67.31ರಷ್ಟು ಫಲಿತಾಂಶ ಸಾಧಿಸಿದೆ.

ಶೈಕ್ಷಣಿಕ ನಗರಿ ಎಂಬ ಹಣೆಪಟ್ಟದ ಧಾರವಾಡ ಜಿಲ್ಲೆಯು ಕಳೆದ 2018-19ನೇ ಸಾಲಿನಲ್ಲಿ ಶೇ.62.71ರಷ್ಟು ಫಲಿತಾಂಶ ಸಾಧಿಸುವ ಮೂಲಕ 23 ಸ್ಥಾನದಲಿದ್ದ ಜಿಲ್ಲೆಯು ಇದೀಗ ಆರಂಕಿ ಜಿಗಿತ ಕಾಣುವ ಮೂಲಕ ರಾಜ್ಯದ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕ್ ಪಟ್ಟಿಯಲ್ಲಿ 17ನೇ ಸ್ಥಾನಕ್ಕೆ ಏರಿದೆ.

ಫಲಿತಾಂಶ ಹಾಗೂ ರ‍್ಯಾಂಕ್ ಪಟ್ಟಿಯಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ. ಪರೀಕ್ಷೆಗೆ ಕುಳಿತ 21,840 ವಿದ್ಯಾರ್ಥಿಗಳ ಪೈಕಿ 17,701 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬರೋಬ್ಬರಿ 7,139 ಜನ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದೇ ಜಿಲ್ಲೆಯ ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ.

ಹೇಳಿಕೊಳ್ಳದ ಫಲಿತಾಂಶ ದಾಖಲಿಸಿದ ಜಿಲ್ಲೆಯು ಮೂರು ವಿಶ್ವವಿದ್ಯಾಲಯ, ಐಐಟಿ, ಐಐಐಟಿ ಸೇರಿ ನೂರಾರು ಹೈಟೆಕ್ ಶಿಕ್ಷಣ ಸಂಸ್ಥೆಗಳನ್ನು ಹೊಂದುವ ಮೂಲಕ ವಿದ್ಯಾಕಾಶಿ ಎಂಬ ನಾಮಾಂಕಿತ ಪಡೆದಿದೆ. ಆದಾಗ್ಯೂ ಫಲಿತಾಂಶ ಸುಧಾರಣೆ ಪ್ರಯತ್ನ ಫಲ ನೀಡದಿರುವುದು ಬೇಸರ.

ಕಳೆದ ಸಲ ಫಲಿತಾಂಶ ಹಾಗೂ ರ‍್ಯಾಂಕ್ ಪಟ್ಟಿಯಲ್ಲಿ ಕುಸಿತ ಕಂಡ ಹಿನ್ನಲೆ ಈ ಸಲ ಟಾಪ್ 10ರ ಪಟ್ಟಿಯಲ್ಲಿ ಬರಲು ನಡೆಸಿದ ಶೈಕ್ಷಣಿಕ ಚಟುವಟಿಕೆಗಳ ಪ್ರಯತ್ನವೂ ಈಡೇರಲಿಲ್ಲ. ಕೊರೋನಾ ಹರಡುವಿಕೆ, ಲಾಕ್‌ಡೌನ್ ಜಾರಿ ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ದುಷ್ಪರಿಣಾಮ ಬೀರಿದಂತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss