ಬೆಂಗಳೂರು: ರಾಜ್ಯದ 17 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಗೃಹ ಇಲಾಖೆಯ ಕಾರ್ಯದರ್ಶಿ ಆಗಿದ್ದ ಎಡಿಜಿಪಿ ಉಮೇಶ್ಕುಮಾರ್ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಡಿ.ರೂಪಾ ಅವರು ವರ್ಗವಾಗಿದ್ದಾರೆ.
ಕಲಬುರ್ಗಿ ಎಸ್ಪಿ ಆಗಿದ್ದ ಇಡಾ ಮಾರ್ಟಿನ್ ಅವರನ್ನು ನಕ್ಸಲ್ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಸಿಮಿ ಮರಿಯಂ ಜಾರ್ಜ್ ಅವರನ್ನು ವರ್ಗಾವಣೆ ಮಾಡಲಾಗಿದೆ
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು:
- ಉಮೇಶ್ ಕುಮಾರ್ , ಎಡಿಜಿಪಿ ಹಾಗೂ ಪ್ರಧಾನ ಕಾರ್ಯದರ್ಶಿ ಗೃಹ ಇಲಾಖೆಯಿಂದ ಎಡಿಜಿಪಿ ಸಿಐಡಿ, ಆರ್ಥಿಕ ಅಪರಾಧ ವಿಭಾಗ.
- ರೂಪಾ ಡಿ, ಐಜಿಪಿ ರೈಲ್ವೆಸ್ ಇಲಾಖೆಯಿಂದ ಐಜಿಪಿ ಹಾಗೂ ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ
- ಎನ್ ಶಶಿಕುಮಾರ್, ಡಿಸಿಪಿ ಬೆಂಗಳೂರು ನಗರ ಉತ್ತರ ವಿಭಾಗದಿಂದ ಎಸ್ಪಿ ವೈರ್ ಲೆಸ್, ಬೆಂಗಳೂರು.
- ರೋಹಿಣಿ ಕಟೋಚ್ ಸೆಪಾಟ್, ಡಿಸಿಪಿ ಬೆಂಗಳೂರು ದಕ್ಷಿಣ ವಿಭಾಗದಿಂದ ಎಸ್ಪಿ ಸಿಐಡಿ, ಬೆಂಗಳೂರು
- ಎಂಎನ್ ಅನುಚೇತ್ , ಡಿಸಿಪಿ ವೈಟ್ ಫೀಲ್ಡ್, ಬೆಂಗಳೂರು ನಗರದಿಂಡ ಡಿಸಿಪಿ ಕೇಂದ್ರ ವಿಭಾಗ, ಬೆಂಗಳೂರು.
- ಬಿ ರಮೇಶ್, ಡಿಸಿ, ಪಶ್ಚಿಮ ವಲಯ, ಬೆಂಗಳೂರು ವಿಭಾಗದಿಂದ ಎಸ್ಪಿ ಸಿಐಡಿ ಬೆಂಗಳೂರು
- ಐಯಾಡಾ ಮಾರ್ಟಿನ್ ಮರ್ಬನಿಯಾಂಗ್), ಎಸ್ಪಿ ಕಲಬುರಗಿ ವಿಭಾಗದಂದ ಎಸ್ಪಿ ನಕ್ಸಲ್ ನಿಗ್ರಹ ದಳ, ಕಾರ್ಕಳ, ಉಡುಪಿ
- ನಿಕಂ ಪ್ರಕಾಶ್ ಅಮೃತ್ , ಎಸ್ಪಿ ಸಿಐಡಿ ಬೆಂಗಳೂರು ವಿಭಾಗದಿಂದ ಎಸ್ಪಿ ರಾಯಚೂರು
- ಇಳಕ್ಕಿಯ ಕರುಣಾಕರನ್ ,ಡಿಸಿಪಿ ವಿವಿಐಪಿ ಸುರಕ್ಷತೆ ಬೆಂಗಳೂರು ವಿಭಾಗದಿಂದ ಎಸ್ಪಿ ಕೆಜಿಎಫ್.
- ಧರ್ಮೇಂದ್ರ ಕುಮಾರ್ ಮೀನಾ, ಎಸ್ಪಿ ವೈರ್ ಲೆಸ್ ಬೆಂಗಳೂರು ವಿಭಾಗದಿಂದ ಡಿಸಿಪಿ ಬೆಂಗಳೂರು ಉತ್ತರ.
- ಸುಮರ್ ಡಿ ಪೆನ್ನೆಕರ್, ಹಳೆ ವರ್ಗಾವಣೆ ರದ್ದುಗೊಂಡಿದ್ದು, ಡಿಸಿಪಿ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
- ಹರೀಶ್ ಪಾಂಡೆ,ಎಸ್ಪಿ ಗುಪ್ತಚರ ಬೆಂಗಳೂರು ವಿಭಾಗದಿಂದ ಡಿಸಿಪಿ ಬೆಂಗಳೂರು ದಕ್ಷಿಣ
- ಮೊಹಮ್ಮದ್ ಸುಜೀತಾ,ಎಸ್ಪಿ ಕೆಜಿಎಎಫ್ ವಿಭಾಗದಿಂದ ಡಿಸಿಪಿ ಸಶಸ್ತ್ರಮೀಸಲು ಪಡೆ, ಕೇಂದ್ರ , ಬೆಂಗಳೂರು
- ಸಿಮಿ ಮರಿಯಂ ಜಾರ್ಜ್, ಸಹಾಯಕ ಐಜಿಪಿ ಕ್ರೈಂ ಬೆಂಗಳೂರು ವಿಭಾಗದಿಂದ ಎಸ್ಪಿ ಕಲಬುರಗಿ.
- ಸಿ.ಬಿ ವೇದಮೂರ್ತಿ , ಎಸ್ಪಿ ರಾಯಚೂರು ವಿಭಾಗದಿಂದ ಎಸ್ಪಿ ಗುಪ್ತಚರ ಬೆಂಗಳೂರು
- ಡಿ ದೇವರಾಜ ಐಪಿಎಸ್ ಎಸ್ಪಿ ಸಿಐಡಿ ಬೆಂಗಳೂರು ವಿಭಾಗದಿಂದ ಡಿಸಿಪಿ ವೈಟ್ ಫೀಲ್ಡ್, ಬೆಂಗಳೂರು
- ಸಂಜೀವ್ ಎಂ ಪಾಟೀಲ್, ಎಸ್ಪಿ ಗುಪ್ತಚರ, ಬೆಂಗಳೂರು ವಿಭಾಗದಿಂದ ಡಿಸಿಪಿ ಬೆಂಗಳೂರು ಪಶ್ಚಿಮ ವಲಯ.